ಮಲ್ಟಿಪ್ಲೆಕ್ಸ್​ಗಳಲ್ಲಿ ತಿಂಡಿ, ತಿನಿಸುಗಳಿಗೆ ದುಬಾರಿ ದರ: ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮಲ್ಟಿಪ್ಲೆಕ್ಸ್​ಗಳಲ್ಲಿ ತಿಂಡಿ, ತಿನಿಸುಗಳಿಗೆ ದುಬಾರಿ ದರ ವಸೂಲಿ ಮಾಡೋದನ್ನ ವಿರೋಧಿಸಿ ವಕೀಲ ಸುನೀಲ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ಹೈಕೋರ್ಟ್​ನ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಮಲ್ಟಿಪ್ಲೆಕ್ಸ್​ಗಳಲ್ಲಿ ತಿಂಡಿ, ತಿನಿಸುಗಳಿಗೆ ದುಬಾರಿ ದರ ವಸೂಲಿ ಮಾಡಲಾಗುತ್ತಿದೆ. ತಿಂಡಿ ತಿನಿಸು, ಪಾನೀಯಗಳಿಗೆ ಎಂಆರ್​ಪಿ ಗಿಂತಲೂ ಹೆಚ್ಚು ವಸೂಲಿ ಮಾಡಲಾಗುತ್ತಿದೆ. MRP ಮೇಲೆ ಒಂದಕ್ಕೆ ಹತ್ತುಪಟ್ಟು ಅಧಿಕ ಚಾರ್ಜ್ ಮಾಡಲಾಗುತ್ತಿದೆ. ಅಲ್ಲದೇ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿಗುವುದೆಲ್ಲವೂ ಜಂಕ್ ಫುಡ್. ಹೊರಗಿನ ತಿಂಡಿ ತಿನಿಸುಗಳನ್ನು ಒಳಗೆ ತೆಗೆದುಕೊಂಡು ಹೋಗಲು ನಿರ್ದೇಶಿಸಬೇಕೆಂದು ಅಂತಾ ವಕೀಲ ಸುನೀಲ್ ಕುಮಾರ್ ಮನವಿ ಮಾಡಿದರು. ನಂತರ ಕೋರ್ಟ್​ ಮೂರು ವಾರಗಳ ಕಾಲ ವಿಚಾರಣೆಯನ್ನ ಮುಂದೂಡಿತು.