ಟೀಮ್ ಇಂಡಿಯಾದ ವೀಕ್ನೆಸ್ ಬಿಟ್ಟುಕೊಟ್ರಾ ಅಶ್ವಿನ್..?

ವಿಶ್ವ ಕ್ರಿಕೆಟ್​​​​ನಲ್ಲಿ ಸದ್ಯದ ಟ್ರೆಂಡ್ ಅಂದ್ರೆ ಅದು ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್ಸ್ ರಶೀದ್ ಖಾನ್ ಹಾಗೂ ಮುಜೀಬ್‌. ಐಪಿಎಲ್​​​​​​ ಸೀಸನ್ 11ರಲ್ಲಿ ತಮ್ಮ ಸ್ಪಿನ್ ಮೋಡಿ ಮೂಲಕ ಎಲ್ಲರ ಗಮನಸೆಳೆದಿರೋ ಯಂಗ್​​​ ಬಾಯ್ಸ್, ಬಾಂಗ್ಲಾ ವಿರುದ್ಧನೂ ಸಹ ತಮ್ಮ ಪರಾಕ್ರಮವನ್ನ ತೋರಿಸಿದ್ರು. ಇದೀಗ ಟೀಮ್ ಇಂಡಿಯಾದ ಮೇಲೂ ಸವಾರಿ ಮಾಡಲು ಸಜ್ಜಾಗಿದ್ದಾರೆ.

ಟೀಮ್ ಇಂಡಿಯಾಕ್ಕೆ ತಿರುಗುಬಾಣ?

ಐಪಿಎಲ್​ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರನಾಗಿದ್ದ ಮುಜೀಬ್​ಗೆ ಕ್ಯಾಪ್ಟನ್ ರವಿಚಂದ್ರನ್ ಅಶ್ವಿನ್ ನೆಟ್ ಪ್ರಾಕ್ಟೀಸ್ ವೇಳೆ ನಿಗೂಢ ಎಸೆತವೊಂದನ್ನ ಹೇಳಿಕೊಟ್ಟಿದ್ದಾರಂತೆ. ಇದೀಗ ಅದೇ ಟೀಮ್ ಇಂಡಿಯಾಗೆ ಮಾರಕವಾಗಲಿದೆಯಾ ಅನ್ನೋ ಪ್ರಶ್ನೆ ಎಲ್ಲರಲ್ಲಿ ಕಾಡತೊಡಗಿದೆ. ಅಶ್ವಿನ್ ಬಳಿ ಕಲಿತ ಸ್ಪಿನ್ ಅಸ್ತ್ರವನ್ನ ಮುಜೀಬ್, ಇದೇ 14ರಂದು ಬೆಂಗಳೂರಲ್ಲಿ ನಡೆಯಲಿರುವ ಭಾರತ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರಯೋಗಿಸುವ ಪ್ಲ್ಯಾನ್​​​​​​​​​​​ನಲ್ಲಿದ್ದಾರೆ.

‘ಅಶ್ವಿನ್ ಜೊತೆ ನೆಟ್​ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ನಿಜಕ್ಕೂ ಅದರಿಂದ ನನಗೆ ತುಂಬಾ ಅನುಕೂಲವಾಗಿದೆ. ಚೆಂಡನ್ನ ಹೇಗೆ ಎಸೆಯಬೇಕೆಂಬ ಬಗ್ಗೆ ಅವರು ಹೇಳಿಕೊಟ್ಟಿದ್ದಾರೆ. ಜೊತೆಗೆ ಅವರು ಹೊಸ ಎಸೆತವನ್ನ ನನಗೆ ಕಲಿಸಿದ್ದಾರೆ. ಅದನ್ನ ಕಲಿಯಲು ನಾನು ಯತ್ನಿಸುತ್ತೇನೆ’ ಎಂದು ಮುಜೀಬ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv