ಜಡೇಜಾ ಗಡ್ಡ ನೋಡಿ ಧೋನಿ-ರೈನಾ ಬಿದ್ದು ಬಿದ್ದು ನಕ್ಕಿದ್ದೇಕೆ..?

ಚೆನ್ನೈ ಸೂಪರ್ ​ಕಿಂಗ್ಸ್​, ಐಪಿಎಲ್ ಸೀಸನ್-12 ಪ್ರಶಸ್ತಿ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಒಂದು. ಸದ್ಯ ಟೂರ್ನಿಯಲ್ಲಿ ಆಡಿರೋ 5 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿರೋ ಸಿಎಸ್​ಕೆ, ಪಾಯಿಂಟ್ ಟೇಬಲ್​ನಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಆನ್​ಫೀಲ್ಡ್​ನಲ್ಲಿ ಚೆನ್ನೈ ಆಟಗಾರರು ಸಿಕ್ಕಾಪಟ್ಟೆ ಜೋಷ್​ನಲ್ಲಿದ್ದಾರೆ. ಹಾಗೇ ಆಫ್​ ದಿ ಫೀಲ್ಡ್​ನಲ್ಲೂ ಸೂಪರ್ ಕಿಂಗ್ಸ್, ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಹೌದು..! ಇತ್ತೀಚಿಗೆಷ್ಟೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಗೆಲುವಿನ ನಂತರ ಸಿಎಸ್​ಕೆ ಆಲ್​ರೌಂಡರ್ ರವಿಂದ್ರ ಜಡೇಜಾ, ತಮ್ಮ ಗಡ್ಡಕ್ಕೆ ಕಲರ್ ಹಾಕಿಸಿಕೊಂಡಿದ್ರು. ಜಡೇಜಾರ ಬ್ರೌನ್ ಬಿಯರ್ಡ್​ ಕಂಡ ಸಿಎಸ್​ಕೆ ಕ್ಯಾಪ್ಟನ್ ಎಂ.ಎಸ್.ಧೋನಿ, ಸುರೇಶ್ ರೈನಾ ಮತ್ತು ಮುರಳಿ ವಿಜಯ್, ಬಿದ್ದು ಬಿದ್ದು ನಕ್ಕಿದ್ರು. ಯಾವಾಗ ತಂಡದ ಸಹ ಆಟಗಾರರು ಕಾಲೆಳೆಯೋಕೆ ಶುರು ಮಾಡಿದ್ರೋ, ಜಡ್ಡು ಮತ್ತೆ ಗಡ್ಡದ ಕಲರ್ ಚೇಂಜ್ ಮಾಡ್ತೀನಿ ಅಂತ ಹೇಳಿದ್ರು. ​