ಚೆನ್ನೈ ಏರ್​​​ಪೋರ್ಟ್​ನಲ್ಲಿ ನಿದ್ರೆಗೆ ಜಾರಿದ ಧೋನಿ-ಸಾಕ್ಷಿ..!

ಮಹೇಂದ್ರ ಸಿಂಗ್ ಧೋನಿ ಎಷ್ಟು ಸಿಂಪಲ್ ಮ್ಯಾನ್ ಅನ್ನೋದು ಎಲ್ಲರಿಗೂ ಗೊತ್ತು. ಮಕ್ಕಳೊಂದಿಗೆ ಮಗುವಾಗಿ, ತಂಡದ ಆಟಗಾರರಿಗೆ ಹಿರಿ ಅಣ್ಣನಾಗಿ, ಕುಟುಂಬಸ್ಥರೊಂದಿಗೆ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳೋ ಧೋನಿ, ಸಾಧಾರಣ ವ್ಯಕ್ತಿಯಾಗಿ ಬದುಕುತ್ತಿದ್ದಾರೆ. ಇನ್ನು ಆನ್​​ ಫೀಲ್ಡ್​ನಲ್ಲಿ ಧೋನಿ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡ್ರೂ, ಕ್ರೆಡಿಟ್ ಮಾತ್ರ ಬೇರೆಯವರಿಗೆ ಕೊಡುತ್ತಾರೆ. ಹಾಗೇ ಆಫ್​ ದಿ ಫೀಲ್ಡ್​ನಲ್ಲಿ ಧೋನಿ ಬಗ್ಗೆ ಹೇಳೋದೇ ಬೇಡ..! ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಧೋನಿ, ಸೈಲೆಂಟ್​ ಆಗಿ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇರುತ್ತಾರೆ. ಇನ್ನು ಪಾರ್ಟಿ ಅದು ಇದು ಅಂತ ಧೋನಿ, ಹೋಗೋರೆ ಅಲ್ಲ..! ಅಷ್ಟು ಸಿಂಪಲ್ ಲೈಫ್​ನ ಲೀಡ್ ಮಾಡ್ತಿದ್ದಾರೆ ಎಂ.ಎಸ್.ಧೋನಿ. ಇಂತಹ ಸರಳ ವ್ಯಕ್ತಿತ್ವ ಹೊಂದಿರುವ ಧೋನಿ ಲೈಫ್ ಸ್ಟೋರಿ ಬಗ್ಗೆ ಹೇಳೋಕೆ ಸಾಕಷ್ಟಿವೆ. ಇಂದು ಮುಂಜಾನೆ ಚೆನ್ನೈ ಏರ್​​ಪೋರ್ಟ್​​ನಲ್ಲಿ ಧೋನಿ ನೆಲದ ಮೇಲೆ ಮಲಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಚೆನ್ನೈನಿಂದ ಜೈಪುರಕ್ಕೆ ತೆರಳಬೇಕಿದ್ದ ಧೋನಿ, ಪತ್ನಿ ಸಾಕ್ಷಿ ಜೊತೆ ನೆಲದ ಮೇಲೆ ನಿದ್ರೆಗೆ ಜಾರಿ ಮತ್ತೊಮ್ಮೆ ತಾನು ಸಿಂಪಲ್ ಮ್ಯಾನ್ ಅನ್ನೋದನ್ನ ಪ್ರೂವ್ ಮಾಡಿದ್ರು. ​