ಅಂಪೈರ್​ ಬಳಿ ಬಾಲ್​ ಪಡೆದಿದ್ದ ಧೋನಿ ಹೇಳಿದ್ದೇನು..?

ಇಂಗ್ಲೆಡ್​ನ ಲಾರ್ಡ್ಸ್​ ಮೈದಾದಲ್ಲಿ ಇತ್ತೀಚೆಗಷ್ಟೇ ಭಾರತ ಮತ್ತು ಇಂಗ್ಲೆಡ್ ನಡುವಿನ ಮೂರನೇ ಏಕದಿನ ಪಂದ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಮಾಜಿ ನಾಯಕ ಮಹೇಂದ್ರಸಿಂಗ್​ ಧೋನಿ ಪಂದ್ಯ ಮುಗಿದ ಬಳಿಕ ಅಂಪೈರ್​ನ ಬಳಿ ಬಾಲ್​ ಪಡೆದಿದ್ರು. ಇದನ್ನ ನೋಡಿದ ಎಲ್ಲರ ಬಾಯಲ್ಲೂ ಧೋನಿ ಒಂಡೆಗೂ ಗುಡ್‌ಬೈ ಹೇಳ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಆ ಎಲ್ಲಾ ಊಹಾಪೋಹಗಳಿಗೆ ಮಹೇಂದ್ರಸಿಂಗ್​ ಧೋನಿ ತೆರೆ ಎಳೆದಿದ್ದಾರೆ.
ಈ ಕಾರಣಕ್ಕೆ ಚೆಂಡು ಪಡೆದಿದ್ದು…!
ಅಂಪೈರ್‌ಗಳಿಂದ ಬಾಲ್‌ ಪಡೆದಿರುವ ಹಿಂದಿನ ಗುಟ್ಟು ರಟ್ಟು ಮಾಡಿರೋ ಧೋನಿ, ಐಸಿಸಿ ವಿಶ್ವಕಪ್‌ 2019ರ ಟೂರ್ನಿಯ ಪ್ರಿಪರೇಷನ್‌ಗಾಗಿ ಈ ಬಾಲ್‌ ಅನ್ನು ಪಡೆದಿರೋದಾಗಿ ಧೋನಿ ಹೇಳಿದ್ದಾರೆ. ಆ ಮೂಲಕ ತಾನು ಇನ್ನೊಂದು ವಿಶ್ವಕಪ್‌ ತನಕ ಟೀಂ ಇಂಡಿಯಾದಲ್ಲೇ ಇರೋ ಸೂಚನೆಯನ್ನು ಕೊಟ್ಟಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆದ ಮೂರು ಪಂದ್ಯಗಳಲ್ಲಿ ಭಾರತ ಸೋತಿದೆ. 2019ರಲ್ಲಿ ನಾವು ಇಂಗ್ಲೆಂಡ್​ನಲ್ಲಿ ವಿಶ್ವಕಪ್​ ಆಡಲಿದ್ದೇವೆ. ಹೀಗಾಗಿ ಇಲ್ಲಿನ ರಿವರ್ಸ್ ಸ್ವಿಂಗ್ ಅನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ತಿಳಿಯಲು ಇಂತಹ ಚೆಂಡು ಸಹಕಾರಿಯಾಗಲಿದೆ ಅಂತ ಹೇಳಿದ್ದಾರೆ. ಇಂತಹ ಬಾಲ್‌ಗಳಿಂದ ನಮ್ಮ ಬೌಲರ್​ಗಳು ಅಭ್ಯಾಸ ನಡೆಸಿದರೆ ಕೊನೆಯ ಓವರ್​ಗಳಲ್ಲಿ ತಂಡ ಸುಧಾರಣೆಯಾಗುತ್ತದೆ ಎಂದು ಭರವಸೆ ಇದೆಯಾಗಿ ಧೋನಿ ತಿಳಿಸಿದ್ದಾರೆ. 40 ಓವರ್​ಗಳ ನಂತರ ವೇಗದ ಬೌಲರ್​ಗಳಿಗೆ ಯಾರ್ಕರ್​ಗಳನ್ನು ಹಾಗೂ ವಿಕೆಟ್​ಗಳನ್ನು ಪಡೆಯಲು ಸಹಾಯವಾಗುತ್ತದೆ. ಕೊನೆ 10 ಓವರ್​ಗಳಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕಲು ಸಹಕಾರಿಯಾಗುತ್ತೆ ಅಂತ ಅಭಿಪ್ರಾಯಪಟ್ಟಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv