ದೀಪಕ್ ಚಹಾರ್ ಮೇಲೆ ಕ್ಯಾಪ್ಟನ್ ಕೂಲ್ ಫುಲ್ ಗರಂ..!

ಕ್ಯಾಪ್ಟನ್ ಕೂಲ್ ಧೋನಿ ಕೋಪಗೊಳ್ಳೋದು ಅಪರೂಪ. ಆದ್ರೆ ಪಂದ್ಯದ ವೇಳೆ ತಂಡದ ಆಟಗಾರರು ಕಳಪೆ ಪ್ರದರ್ಶನ ನೀಡಿದಾಗ, ಧೋನಿ ಫುಲ್ ಗರಂ ಆಗ್ತಾರೆ. ಯಾವುದೇ ಮುಲಾಜಿಲ್ಲದೇ ತಮ್ಮದೇ ಸ್ಟೈಲ್​ನಲ್ಲಿ ಕ್ಲಾಸ್​ ತಗೊಳ್ತಾರೆ. ನಿನ್ನೆ ಸಿಎಸ್​ಕೆ- ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಧೋನಿ ಬೌಲರ್ ದೀಪಕ್ ಚಹಾರ್ ಮೇಲೆ ಕೋಪಗೊಂಡ್ರು. ಪಂಜಾಬ್ ಇನ್ನಿಂಗ್ಸ್​ನ 19ನೇ ಓವರ್​ ಬೌಲ್ ಮಾಡುತ್ತಿದ್ದ ಚಹಾರ್, ಸತತ ಎರಡು ನೋ ಬಾಲ್​( ಸೊಂಟದ ಮೇಲೆ ಫುಲ್ ಟಾಸ್​) ಹಾಕಿದ್ರು. ಇದರಿಂದ ಕೆರಳಿದ ಧೋನಿ, ನೇರಾ ಚಹಾರ್ ಹತ್ತಿರ ಬಂದು ಸಲಹೆ ನೀಡಿದ್ರು. ಧೋನಿಯಿಂದ ಸಲಹೆ ಪಡದ ಚಹಾರ್, ನಂತರದ ಎಸೆತದಲ್ಲಿ ಡೇವಿಡ್ ಮಿಲ್ಲರ್​ರನ್ನ ಕ್ಲೀನ್ ಬೌಲ್ಡ್ ಆದ್ರು.