ಅಂಪೈರ್​ಗಳ ವಿರುದ್ಧ ವಾಗ್ದಾಳಿ..! ಧೋನಿಗೆ ಶಿಕ್ಷೆ ಏನು ಗೊತ್ತಾ..?

ಮಿಸ್ಟರ್ ಕೂಲ್ ಅಂತಾನೇ ಫೇಮಸ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ, ಇದೀಗ ತನ್ನ ತಾಳ್ಮೆ ಕಳೆದುಕೊಂಡು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಹೌದು..! ನೆನ್ನೆ ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ, ಆನ್​ಫೀಲ್ಡ್​ ಅಂಪೈರ್​ಗಳ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿ ಟೀಕೆಗೆ ಗುರಿಯಾಗಿದ್ದಾರೆ. ಯಸ್..! ಕನ್ಫೂಶನ್ ಶುರುವಾಗಿದ್ದೇ, ಕೊನೆಯ ಓವರ್​ನ ಟೆನ್ಶನ್ ಮ್ಯಾಚ್​ನಲ್ಲಿ. 19.4ನೇ ಓವರ್​ನಲ್ಲಿ ಬೆನ್​ ಸ್ಟೋಕ್ಸ್​ ಎಸೆದ ಸ್ಲೋ ಫುಲ್​ ಟಾಸ್ ಚೆಂಡನ್ನ, ಸ್ಟ್ರೇಟ್​ ಅಂಪೈರ್ ಉಲ್ಲಾಸ್ ಗಾಂಧಿ ನೋ ಬಾಲ್ ಅಂತ ಘೋಷಿಸಿದ್ರು. ಆದ್ರೆ ಸ್ಕೇರ್​ ಲೆಗ್​ನಲ್ಲಿ ಇದ್ದ ಮತ್ತೊರ್ವ ಅಂಪೈರ್​ ಬ್ರೂಸ್ ಆಕ್ಸನ್​ಫೋರ್ಡ್, ಅದು​ ನೋ ಬಾಲ್ ಅಲ್ಲ ಲೀಗಲ್ ಡಿಲಿವರಿ ಅಂತ ಸಿಗ್ನಲ್ ನೀಡಿದ್ರು. ಅಂಪೈರ್​ಗಳ ತೀರ್ಮಾನದಿಂದ ಕೋಪಗೊಂಡ ಧೋನಿ, ಡಗೌಟ್​ನಿಂದ ಸೀದಾ ಫೀಲ್ಡ್​ಗೆ ಆಗಮಿಸಿದ್ರು. ಕೆಲ ಕಾಲ ಮಾಹಿ ಅಂಪೈರ್​ಗಳ ವಿರುದ್ಧ ವಾಗ್ವಾದ ನಡೆಸಿದ್ರು. ನಂತರ ಬೆನ್ ಸ್ಟೋಕ್ಸ್​ ಮತ್ತಿತರೆ ಆಟಗಾರರು, ಧೋನಿಯನ್ನ ಕೂಲ್ ಮಾಡಿ ಕಳುಹಿಸಿದ್ರು. ಐಸಿಸಿ ಲೆವೆಲ್ 2 ನಿಯಮ ಉಲ್ಲಂಘಿಸಿದ ಚೆನ್ನೈ ಸೂಪರ್​ಕಿಂಗ್ಸ್​ ನಾಯಕ ಎಂ.ಎಸ್.ಧೋನಿಗೆ ಮ್ಯಾಚ್ ರೆಫ್ರಿ ಪ್ರಕಾಶ್ ಭಟ್ ಶೇಕಡ 50ರಷ್ಟು ದಂಡು ವಿಧಿಸಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv