ಕುಂದಗೋಳ ಕ್ಷೇತ್ರದ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಹುಬ್ಬಳ್ಳಿ: ಮೇ 19ಕ್ಕೆ ಕುಂದಗೋಳ ಉಪಚುನಾವಣೆ ನಡೆಯಲಿದೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್​​ಗಾಗಿ ಬಿಗ್ ಫೈಟ್ ಶುರುವಾಗಿದೆ. ಬಿಜೆಪಿಯ ಇಬ್ಬರು ನಾಯಕರಾದ ಎಸ್​ಐ ಚಿಕ್ಕನಗೌಡ ಹಾಗೂ ಎಂ.ಆರ್ ಪಾಟೀಲ್ ನಡುವೆ ಟಿಕೆಟ್​​ಗಾಗಿ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಲಾಗಿದೆ. ಎಸ್​ಐ ಚಿಕ್ಕನಗೌಡ ಬಿ‌ಎಸ್ ಯಡಿಯೂರಪ್ಪ ಸಂಬಂಧಿ ಆಗಿದ್ದಾರೆ. ಚಿಕ್ಕನಗೌಡಗೆ ಟಿಕೆಟ್ ಸಿಗಲಿದೆ ಅನ್ನೋ ಸುದ್ದಿ ಬಂದ ಬೆನ್ನಲ್ಲೇ ಆಕಾಂಕ್ಷಿ ಎಂ.ಆರ್.ಪಾಟೀಲ್ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂ.ಆರ್ ಪಾಟೀಲ್ ಬೆಂಬಲಿಗರು ವಾಟ್ಸಪ್​ ಗ್ರೂಪ್​​ನಲ್ಲಿ ಟಿಕೆಟ್ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರಿಂದಲೇ ಚಿಕ್ಕನಗೌಡ ಸೋಲುತ್ತಾರೆ. ಸಿ.ಎಸ್​.ಶಿವಳ್ಳಿ ಪತ್ನಿ ಎದುರು ಚಿಕ್ಕನಗೌಡ ಸೋಲ್ತಾರೆ. ಹೀಗಾಗಿ ಗ್ರೌಂಡ್​​ ರಿಪೋರ್ಟ್​ ಆಧರಿಸಿ ಟಿಕೆಟ್​​ ನೀಡಬೇಕೆಂದು ಬೆಂಬಲಿಗರು ಆಗ್ರಹಿಸುತ್ತಿದ್ದಾರೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv