ಬಿಜೆಪಿ ಹೈಕಮಾಂಡ್​ಗೆ ತಲೆನೋವಾಯ್ತು ಎಂ.ಆರ್​.ಪಾಟೀಲ್ ನಡೆ..!

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಯಡಿಯೂರಪ್ಪ ಸಂಬಂಧಿ ಸಿಎಸ್​ ಚಿಕ್ಕನಗೌಡಗೆ ಟಿಕೆಟ್​​ ನೀಡೋ ಮುನ್ಸೂಚನೆ ಸಿಗುತ್ತಿದ್ದಂತೆ ಮತ್ತೋರ್ವ ಟಿಕೆಟ್​ ಆಕಾಂಕ್ಷಿ ಎಂ.ಆರ್​.ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ .

ಟಿಕೆಟ್ ಕೈತಪ್ಪುವ ಮುನ್ಸೂಚನೆ ಸಿಗುತ್ತಿದ್ದಂತೆ ಎಮ್.ಆರ್.ಪಾಟೀಲ್ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೊಬೈಲ್ ಕೂಡ ಸ್ವಿಚ್​​ ಆಫ್ ಮಾಡಿಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಎಮ್.ಆರ್.ಪಾಟೀಲ್ ಬೇಸರಗೊಂಡಿದ್ದರು. ಉಪಚುನಾಣೆಯಲ್ಲಾದ್ರೂ ಟಿಕೆಟ್ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದರು.

ಸದ್ಯ ಎಂ.ಆರ್.ಪಾಟೀಲ್ ನಡೆಯಿಂದ ಹೈಕಮಾಂಡ್​ ಇನ್ನೂ ಟಿಕೆಟ್​ ಘೋಷಣೆ ಮಾಡಿಲ್ಲ. ಒಂದ್ಕಡೆ ಪಾಟೀಲ್​​ಗೇ ಟಿಕೆಟ್​ ನೀಡುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಸದ್ಯ ಎಂ.ಆರ್.ಪಾಟೀಲ್ ಯಾರ ಸಂಪರ್ಕಕ್ಕೂ ಸಿಗದೇ ಇರೋದು ಬಿಜೆಪಿ ಹೈಕಮಾಂಡ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv