ಶ್ರೀಗಳ ಭೇಟಿ ಬಳಿಕ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಿವಶಂಕರಪ್ಪ ಹೇಳಿಕೆ..!

ತುಮಕೂರು: ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ಸದ್ಯ ಸುಧಾರಿಸಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಇಡೀ ಕರ್ನಾಟಕವೇ ಆತಂಕಗೊಂಡಿದೆ. ಶ್ರೀಗಳು ಶೀಘ್ರವಾಗಿ ಗುಣಮುಖರಾಗಬೇಕೆಂದು ಇಡೀ ಕರುನಾಡೇ ಪ್ರಾರ್ಥಿಸುತ್ತಿದೆ. ಹಲವು ಗಣ್ಯರು ಶ್ರಿಗಳ ದರ್ಶನ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ ಕೂಡ ಶ್ರೀಗಳ ದರ್ಶನ ಪಡೆದಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರುನಾಡಿನ ನಡೆದಾಡುವ ದೇವರಾದ ಸಿದ್ದಗಂಗಾ ಶ್ರೀಗಳು ಸದ್ಯ, ಅವರೇ ಉಸಿರಾಡುವ ಮಟ್ಟಕ್ಕೆ ಚೇತರಿಕೆ ಹೊಂದಿದ್ದಾರೆ. ಅವರನ್ನು ಇನ್ನೂ ನಾಲ್ಕು ವರ್ಷ ಭಗವಂತ ಉಳಿಸಲಿ. ಲಕ್ಷಾಂತರ ಮಕ್ಕಳಿಗೆ ಅವರು ದಾರಿದೀಪವಾಗಿದ್ದಾರೆ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಲೋಕಸಭೆಯಲ್ಲಿ ಒತ್ತಾಯಿಸಿದ್ದೇವೆ. ಈ ಬಾರಿ ಅವರಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಯವರನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಇನ್ನು ಶಾಮನೂರು ಶಿವಶಂಕರಪ್ಪ ಕೂಡ ಶ್ರೀಗಳ ದರ್ಶನ ಪಡೆದಿದ್ದು, ಶ್ರೀಗಳ ದರ್ಶನ ನನ್ನ ಪುಣ್ಯ ಅಂತ ಅಂದುಕೊಂಡಿದ್ದೇನೆ. ಯಡಿಯೂರಪ್ಪ ನವರು ಹೇಳಿದ್ದರಿಂದ ನಾನು ಬಂದು ದರ್ಶನ ಪಡೆದಿದ್ದೇನೆ. ಶ್ರೀಗಳು ಲಕ್ಷಾಂತರ ಮಕ್ಕಳಿಗೆ ದಾರಿ ತೋರಿಸಿದ್ದಾರೆ. ಅವರು ಚಿರಂಜೀವಿಗಳಾಗಿ ಬಾಳಲಿ ಎಂಬ ಆಸೆ ಇದೆ. ಸದ್ಯ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಇನ್ನಷ್ಟು ದಿನಗಳು ನಮ್ಮೂಂದಿಗಿರಲಿ ಎಂಬುದೇ ನನ್ನ ಆಸೆ ಎಂದಿದ್ದಾರೆ.