ಎಂ.ಪಿ. ರವೀಂದ್ರಗೆ ನುಡಿನಮನ, ಸಿದ್ದರಾಮಯ್ಯ-ದಿನೇಶ್ ಗುಂಡೂರಾವ್ ಭಾಗಿ

ದಾವಣಗೆರೆ: ಇತ್ತೀಚಿಗೆ ನಿಧನರಾದ ಮಾಜಿ ಶಾಸಕ ದಿ. ಎಂ.ಪಿ. ರವೀಂದ್ರ ಅವರಿಗೆ ಇಂದು ನುಡಿ-ನಮನ ಕಾರ್ಯಕ್ರಮವು ಜಿಲ್ಲೆಯ ಹರಪನಹಳ್ಳಿಯ ಎಡಿಬಿ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ. ಎಂ.ಪಿ.ರವೀಂದ್ರರವರು ದಿ.ಎಂ.ಪಿ ಪ್ರಕಾಶರವರ ಪುತ್ರರು. ಕಾರ್ಯಕ್ರಮದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್. ಆಂಜನೇಯ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ, ರವೀಂದ್ರ ತಾಯಿ ರುದ್ರಾಂಭ ಸೇರಿ ಹಲವರು ಭಾಗಿಯಾಗಿದ್ದಾರೆ. ಈ ನುಡಿನಮನ ಕಾರ್ಯಕ್ರಮದಲ್ಲಿ ದಿವಂಗತ ಎಂ.ಪಿ. ರವೀಂದ್ರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv