ರಾಜ್ಯದಲ್ಲೇ ಉಡುಪಿ ಪ್ರಥಮ, ದ.ಕ ದ್ವಿತೀಯ ಆದ್ರೂ ಕರಾವಳಿಗರಿಗೆ ತಿಳುವಳಿಕೆ ಇಲ್ಲ ಅಂತೀರಾ ಸಿಎಂ..?’

ಮಂಗಳೂರು: ಪಿಯುಸಿ  ಫಲಿತಾಂಶದಲ್ಲಿ ದ.ಕ‌ ಜಿಲ್ಲೆ  ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಸದ ನಳೀನ್​ ಕುಮಾರ್​ ಕಟೀಲ್​ ಸಿಎಂ ಕುಮಾರಸ್ವಾಮಿಗೆ ಟ್ವೀಟ್​ ಮಾಡಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ ಉಡುಪಿ – ದಕ್ಷಿಣ ಕನ್ನಡ, ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಮುಖ್ಯಮಂತ್ರಿಯವರೇ.. ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ.. ಇದು ಕ್ಷಮೆ ಕೇಳುವ ಸಮಯ  ಎಂದು ಟ್ವೀಟ್​ ಮಾಡಿದ್ದಾರೆ.

ಈ ಹಿಂದೆ  ಉಡುಪಿಯಲ್ಲಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ. ಮೋದಿ ಇಲ್ಲಾಂದ್ರೆ ದೇಶಕ್ಕೆ ರಕ್ಷಣೆಯೇ ಇಲ್ಲ ಅಂತ ಬಿಂಬಿಸಲಾಗ್ತಿದೆ. ಕರಾವಳಿಯ ಮೂರು ಜಿಲ್ಲೆಗಳ ಜನರು ತಿಳಿವಳಿಕೆ ಉಳ್ಳವರು, ಪ್ರಜ್ಞಾವಂತರು. ತಿಳಿವಳಿಕೆ ಇರುವ ಜನರು ಯಾಕೆ ಬಿಜೆಪಿಯನ್ನು ಬೆಂಬಲಿಸ್ತೀರಿ ಎಂದು ಹೇಳಿಕೆ ನೀಡಿದ್ದರು.

ಇದನ್ನು ಓದಿ: ತಿಳಿವಳಿಕೆಯುಳ್ಳ ಕರಾವಳಿಗರು ಬಿಜೆಪಿಯನ್ನ ಯಾಕೆ ಬೆಂಬಲಿಸ್ತೀರಿ: ಸಿಎಂ ಪ್ರಶ್ನೆ


Follow us on:

YouTube: firstNewsKannada  Instagram: firstnews.tv  FaceBook: fir