ಹುಲಿ ಉಗುರು ಮಾರಾಟ ಮಾಫಿಯಾ ಬೆಂಬಲಕ್ಕೆ ನಿಂತ್ರಾ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ..?

ಚಿಕ್ಕಮಗಳೂರು: ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಗೂಂಡಾ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಅಲ್ಲದೇ ಹುಲಿ ಉಗುರು ಮಾರಾಟ ಮಾಫಿಯಾಗೆ ಶಾಸಕರು ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹುಲಿ ಉಗುರು ಮಾರಾಟ ಮಾಡುತ್ತಿದ್ದ ವೆಂಕಟೇಶ್, ರಂಜಿತ್ ಹಾಗೂ ಶಿವಕುಮಾರ್ ಎಂಬುವವರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಶಾಸಕರು ಅಧಿಕಾರಿಗಳಿಗೆ ಅವಾಜ್​ ಹಾಕಿದ್ದು, ಏಕವಚನದಲ್ಲಿ ನಿಂದಿಸಿದ್ದಾರೆ.  ರಂಪ ಮಾಡಿಬಿಡ್ತೀನಿ.ನನಗೆ ಏನು ಸಮಸ್ಯೆ ಆಗಲ್ಲ. ನನ್ನ ಫೋನ್ ರಿಸೀವ್ ಮಾಡ್ದೆ ಇದ್ರೆ ಆಫೀಸ್ ಬಾಗಿಲು ಹಾಕಿಸ್ತೀನಿ ಎಂದು ಬೆದರಿಸಿ, ಮೂಡಿಗೆರೆ ಅರಣ್ಯ ಇಲಾಖೆಯ ಕಚೇರಿಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮೂಡಿಗೆರೆ ಶಾಸಕರ ವಿರುದ್ಧ ದೂರು‌ ನೀಡಲು ಮುಂದಾದ ಪತ್ನಿ ಕುಟುಂಬಸ್ಥರು..!

Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv