ಬಿ.ವಿ.ನಾಯಕ್​ ಅಳಿಯನಿಗೆ ಐಟಿ ಶಾಕ್​

ರಾಯಚೂರು: ನಗರದ ಜಿಲ್ಲಾ ಪಂಚಾಯತ್​ ಸದಸ್ಯನ ಮನೆ ಮೇಲೆ ಐಟಿ ಇಲಾಖೆ ಮತ್ತು ಚುನಾವಣಾ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ಲಿಂಗಸುಗೂರು ರಸ್ತೆಯಲ್ಲಿರುವ ಕೃಷ್ಣ ಮೇಡೌಸ್​ನಲ್ಲಿರುವ ಜಿಪಂ ಸದಸ್ಯ ಸಂದೀಪ್ ‌ನಾಯಕ್​ ಮನೆ ಮೇಲೆ ದಾಳಿ ನಡೆದಿದೆ. ಈತ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್​ರ ಅಳಿಯ ಎನ್ನಲಾಗ್ತಿದೆ. 20 ವಾಹನಗಳಲ್ಲಿ ಬಂದ ಅಧಿಕಾರಿಗಳ ತಂಡ, ದಾಳಿ ವೇಳೆ ಸುಮಾರು ₹2 ಲಕ್ಷ ಹಣವನ್ನು ಜಪ್ತಿ ಮಾಡಿದೆ. ಜಿ.ಪಂ ಸಿಇಒ ನಲೀನ್ ಅತುಲ್, ರಾಯಚೂರು ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ ಹಾಗೂ ಪೋಲೀಸ್ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.