ಹಿಂದಿ ‘ಕೆಜಿಎಫ್​’ನಲ್ಲಿ ‘ಜೋಕೆ’ ಇಲ್ಲ..!! ನಾಳೆಯಿಂದ ‘ಗಲ್ಲಿ ಗಲ್ಲಿ’ ಶೂಟಿಂಗ್ ..!

ಕೆಜಿಎಫ್​ ಸಿನಿಮಾದ ಟೈಟಲ್ ಸಾಂಗ್ ಜನರ ಕಿವಿಯಲ್ಲಿ ಇನ್ನೂ ಗುಂಯ್​ ಗುಟ್ಟುತ್ತಿದೆ. ‘ಸಲಾಂ ರಾಕಿ ಭಾಯ್​’ ವಿದ್ಯುತ್​ ಸಂಚರಿಸುವಷ್ಟು ಪವರ್​ಫುಲ್​ ಹಾಡು. ಈ ಹಾಡಿಗೆ ಯಶ್​ ಫ್ಯಾನ್ಸ್​​ ಜೈಕಾರ ಹಾಕ್ತಿದ್ದಾರೆ. ರಾಕಿಂಗ್ ಸ್ಟಾರ್​ ಅಭಿಮಾನಿಗಳಿಗೆ ಇದುವೇ ಆ್ಯಂಥಮ್ ಆಗಿಬಿಟ್ಟಿದೆ. ಅಂದ್ಹಾಗೆ ಕೆಜಿಎಫ್​ನಲ್ಲಿ ತಮನ್ನಾ ಕುಣಿದಿರೋ ಮತ್ತೊಂದು ಪಾರ್ಟಿ ಸಾಂಗಿದೆ. ಆದರೆ ತಮನ್ನಾ ನೃತ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ಹಿಂದಿ ಪ್ರೇಕ್ಷಕರಿಗಿಲ್ಲ. ಯಾಕೆಂದ್ರೆ ಈ ಹಾಡಿನ ಬದಲಾಗಿ ಹೊಸದೊಂದು ಸಾಂಗ್​, ಹಿಂದಿಯಲ್ಲಿ ಸಿದ್ಧವಾಗ್ತಿದೆ.
ಜೋಕೆ… ಬದಲಾಗಿ ಗಲ್ಲಿ ಗಲ್ಲಿ..!
ಕೆಜಿಎಫ್​ನ ಐಟಂ ಸಾಂಗ್​ ಚಿತ್ರರಸಿಕರಲ್ಲಿ ಕುತೂಹಲ ಕೆರಳಿಸಿತ್ತು. ಯಶ್​- ತಮನ್ನಾ ಒಟ್ಟಿಗೆ ಕುಣಿದಿರೋದ್ರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಸಿನಿಮಾ ಬಿಡುಗಡೆಗೆ ಬಂದು ನಿಂತಿದೆ. ಇಂತಹ ಟೈಂನಲ್ಲೆ ಹಿಂದಿ ಅವತರಣಿಕೆಯಲ್ಲಿ ಜೋಕೆ ಹಾಡು ಬದಲಿಸಲಾಗ್ತಿದೆ. ‘ಜೋಕೆ ನಾನು ಬಳ್ಳಿಯ ಮಿಂಚು..’ ಕನ್ನಡ ಎವರ್​​ಗ್ರೀನ್​ ಹಾಡುಗಳಲ್ಲೊಂದು. ಆದರೆ ಕೆಜಿಎಫ್​ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಘರ್ಜಿಸೋಕೆ ಮುಂದಾಗ್ತಿದೆ. ಹೀಗಾಗಿ ಹಿಂದಿಯಲ್ಲಿ ಜೋಕೆ ಬದಲು ಮತ್ತೊಂದು ಹಾಡನ್ನು ಸೇರಿಸಲಾಗ್ತಿದೆ. ಜಾಕಿ ಶ್ರಾಫ್​ – ಸಂಗೀತ ಬಿಜ್ಲಾನಿ ನಟನೆಯ ‘ತ್ರಿದೇವ್​’ ಬಿ ಟೌನ್​ನ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾದ ‘ಗಲ್ಲಿ ಗಲ್ಲಿ ಮೇನ್​ ಪಿಥ್ರಾ ಹೈ..’ ಸೂಪರ್ ಹಿಟ್ ಪಾರ್ಟಿ ಸಾಂಗ್​. ಇದೇ ಹಾಡನ್ನು ಹಿಂದಿ ಕೆಜಿಎಫ್​ನಲ್ಲಿ ಸೇರಿಸಲಾಗ್ತಿದೆ. ತಮನ್ನಾ ಬದಲಾಗಿ ಬಾಲಿವುಡ್​ ನಟಿ ಮೌನಿ ರಾಯ್​ ಯಶ್​ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ನಾಳೆಯಿಂದ ಮುಂಬೈನ ಗೊರೆಗಾಂವ್​ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv