ಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ನೆಲಮಂಗಲ: ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾಗಿರೋ ಘಟನೆ ನೆಲಮಂಗಲ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕಿತ್ಸೆಗಾಗಿ ನೆಲಮಂಗಲದ ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯೆ ತಾಯಿ ರಾಧಾ ( 28) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಕ್ಕಳಾದ ಚಿನ್ಮಯಿ (3), ಬಿಂದು (2) ತಾಯಿಯಿಂದಲೇ ಹತ್ಯೆಗೀಡಾಗಿದ್ದಾರೆ.
ಪತಿ ಶ್ರೀನಿವಾಸ್ ಜೊತೆ ಕಳೆದ ಆರು ವರ್ಷಗಳ ಹಿಂದೆಯಷ್ಟೇ ರಾಧಾಗೆ ಮದುವೆಯಾಗಿತ್ತು. ಪತಿ ಶ್ರೀನಿವಾಸ್ ಸದ್ಯ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಹಾರ್ಡ್‌ವೇರ್ ಶಾಪ್ ನಡೆಸುತ್ತಿದ್ದಾರೆ. ಆದ್ರೆ, ಈ ಹೃದಯವಿದ್ರಾವಕ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *