ತಾಯಿ ಸತ್ತ ಸುದ್ದಿಯ ಜೊತೆಯಲ್ಲೇ ಮಗಳಿಗೂ ಬಂತು ಸಾವು!

ಚನ್ನಪಟ್ಟಣ: ತಾಯಿ-ಮಕ್ಕಳ ಸಂಬಂಧವೇ ಹಾಗೆ. ಬೆಲೆ ಕಟ್ಟಲಾಗದ ಬಂಧ ಅದು. ಈ ಮಮತೆಯ ಬಂಧಕ್ಕೆ ಸಾಕ್ಷಿ ಎಂಬಂತೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಮನಕಲಕೋ ಘಟನೆಯೊಂದು ನಡೆದಿದೆ. ಜನ್ಮ ಕೊಟ್ಟು ಕೈತುತ್ತು ನೀಡಿ ಬೆಳೆಸಿದ ಅಮ್ಮ ಇಹಲೋಕ ತ್ಯಜಿಸುತ್ತಿದ್ದಂತೆಯೇ ಆಘಾತ ತಾಳಲಾರದೆ ಮಗಳೂ ಅಮ್ಮನ ದಾರಿ ಹಿಡಿದಿದ್ದಾಳೆ.

ಗ್ರಾಮದ ನಿವಾಸಿಯಾದ ತಾಯಿ ಪುಟ್ಟಲಿಂಗಮ್ಮ ಸೋಮವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಪುಟ್ಟಲಿಂಗಮ್ಮ ಅವರ ಮಗಳು ಪದ್ಮಮ್ಮ ಅವರಿಗೆ ತಿಳಿಸಲಾಗಿತ್ತು. ಆದ್ರೆ ತಾಯಿಯ ಸಾವಿನ ಸುದ್ದಿ ಕಿವಿಗೆ ಬೀಳ್ತಿದ್ದಂತೆಯೇ ಮಗಳು ಕೂಡ ಎದೆ ಹಿಡಿದುಕೊಂಡು ಕುಸಿದು ಬಿದ್ದಿದ್ದಳು. ಕೂಡಲೇ ಆಕೆಯನ್ನ ಆಸ್ಪತ್ರೆಗೆ ತಗೊಂಡು ಹೋಗಲಾಗಿತ್ತು. ಆದ್ರೆ ಆ ವೇಳೆಗಾಗಲೇ ಹೃದಯಾಘಾತದಿಂದ ಪದ್ಮಮ್ಮ ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಸ್ವಗ್ರಾಮದಲ್ಲಿ ಈಗಾಗಲೇ ಪುಟ್ಟಲಿಂಗಮ್ಮಳ ಅಂತ್ಯಸಂಸ್ಕಾರ ನೆರವೇರಿದೆ. ಮಗಳು ಪದ್ಮಮ್ಮಳ ಅಂತ್ಯಸಂಸ್ಕಾರ ಮಂಗಳವಾರ ನಡೆಯಲಿದೆ. ತಾಯಿ-ಮಗಳು ಒಬ್ಬರ ಹಿಂದೊಬ್ಬರಂತೆ ಅಗಲಿರುವುದು ಸಂಬಂಧಿಕರನ್ನು ಶೋಕದ ಕಡಲಲ್ಲಿ ಮುಳುಗಿಸಿದೆ.

Leave a Reply

Your email address will not be published. Required fields are marked *