ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ

ಹಾಸನ: ತಾಯಿ ಹಾಗೂ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರಸೀಕೆರೆ ತಾಲೂಕು ಹೆಬ್ಬಾರನಹಳ್ಳಿಯಲ್ಲಿ ಸಂಭವಿಸಿದೆ. ಶಾರದಮ್ಮ(63) ಮತ್ತು ಯಶೋಧ(40) ಮೃತ ದುರ್ದೈವಿಗಳು. ಮದುವೆಯಾದ ಒಂದೇ ವರ್ಷಕ್ಕೆ ಗಂಡನ ಮನೆ ಬಿಟ್ಟು ತವರು ಸೇರಿದ್ದ ಯಶೋಧ, ಕಳೆದ 1 ವರ್ಷದಿಂದ ಮನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ತಾಯಿ ಹಾಗೂ ಮಗಳು ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv