ಮಾಳಿಗೆ ಕುಸಿದು ಬಿದ್ದು ಮಕ್ಕಳು ಸೇರಿ ನಾಲ್ವರ ಸಾವು

ಚಿತ್ರದುರ್ಗ: ಮಾಳಿಗೆ ಕುಸಿದು ಬಿದ್ದು ತಾಯಿ ಮತ್ತು ಮೂವರು ಮಕ್ಕಳು ದುರ್ಮರಣಕ್ಕಿಡಾದ ಘಟನೆ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ. ನಾಗರತ್ನಮ್ಮ(30) ಹಾಗೂ ಮಕ್ಕಳಾದ ಕೋಮಲ(02), ತೀರ್ಥವರ್ಧನ(04) ಮತ್ತು ಯಶಸ್ವಿನಿ(05) ಮೃತ ದುರ್ದೈವಿಗಳು. ಘಟನೆಯಲ್ಲಿ ಚಂದ್ರಶೇಖರ್ ಹಾಗೂ ದೇವಿಕಾ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv