ಜೀವತೆತ್ತ ಮೇಲೆ, ಆ ಹೋರಾಟಗಾರನಿಗೆ ಬೆಲೆಕೊಟ್ಟ ಕೇಂದ್ರ ಸರ್ಕಾರ!

ನವದೆಹಲಿ : ಪರಿಸರವಾದಿ ಮತ್ತು ಗಂಗಾನದಿ ಸ್ವಚ್ಛತೆಗಾಗಿ ಹೋರಾಟ ಮಾಡುತ್ತಿದ್ದ ಅಗರ್ವಾಲ್​ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಉಪವಾಸ ಕುಳಿತಿದ್ದರು. ಆದರೆ ನಿನ್ನೆ ಅವರು ವಿಧಿವಶರಾದರು. ಇದೀಗ ಅವರ ನಿಧನದ ಬಳಿಕ ಕೇಂದ್ರ ಸರ್ಕಾರ ಇವರ ಬೇಡಿಕೆಗಳನ್ನು ಪೂರೈಸಲು ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್​ ಗಡ್ಕರಿ, ಅಗರ್ವಾಲ್​ರ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿತ್ತು ಎಂದಿದ್ದಾರೆ. ಗಂಗಾ ನದಿ ಸ್ವಚ್ಛತೆಗಾಗಿ ಕಾನೂನು ತರಬೇಕು ಎಂಬ ಅಗರ್ವಾಲ್​ ಬೇಡಿಕೆಯನ್ನು ಸಂಸತ್ತಿನ ಒಪ್ಪಿಗೆಗಾಗಿ ಕಳುಹಿಸಲಾಗಿದೆ ಎಂದರು. ಇನ್ನು ಅಗರ್ವಾಲ್​ ಉಪವಾಸದ ಸಮಯದಲ್ಲಿ ನಾವು ಅವರಿಗೆ ಪತ್ರ ಬರೆದಿದ್ದು, ನಿಮ್ಮ ಹಲವಾರು ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದೆವು ಎಂದಿದ್ದಾರೆ.
ಇನ್ನು ಅಗರ್ವಾಲ್​ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ಪಕ್ಷದ ಮುಖಂಡ ಸಂಜಯ್​ ಸಿಂಗ್​, ಕೇಂದ್ರ ಸರ್ಕಾರದ ಅಜಾಗರೂಕತೆಯಿಂದ ಧೀಮಂತ ಚಳವಳಿಗಾರನನ್ನು ಕಳೆದುಕೊಳ್ಳುವಂತಾಯಿತು ಎಂದು ಆರೋಪಿಸಿದ್ದಾರೆ. ಅಲ್ಲದೆ, ಸರ್ಕಾರದಲ್ಲಿ ನನ್ನದೊಂದು ಮನವಿಯಿದ್ದು, ಗಂಗಾನದಿಯನ್ನು ಸ್ವಚ್ಛತೆ ಮಾಡುವ ಕೆಲಸ ಮಾಡಿ. ಅದನ್ನು ಬಿಟ್ಟು ಈ ಹೆಸರನ್ನು ಬಳಸಿಕೊಂಡು ಚುನಾವಣೆಗೆ ಮತ ಪಡೆಯುವ ಯತ್ನಗಳನ್ನು ಮಾಡಬೇಡಿ ಅಂತಾ ಟೀಕಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv