ರಕ್ತಹೀನತೆ ಕೇವಲ ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಿಗೂ ಡೇಂಜರ್..!

ಶರೀರದಲ್ಲಿ ಕಬ್ಬಿಣದಂಶ ಕೊರತೆಯಿಂದ ಹಿಮೋಗ್ಲೋಬಿನ್ ಸಮಸ್ಯೆ ಕಂಡು ಬರುತ್ತದೆ. ಅನಿಮಿಯಾ ಅಥವಾ ರಕ್ತಹೀನತೆಯಿಂದ ಅನೇಕರು ಬೇಗನೆ ಆಯಾಸಕ್ಕೆ ತುತ್ತಾಗುತ್ತಾರೆ. ರಕ್ತ ಹೀನತೆಗೆ ಪ್ರಮುಖ ಕಾರಣ ಕಬ್ಬಿಣಾಂಶದ ಕೊರತೆ. ಇತ್ತೀಚೆಗೆ ಡಯಾಗ್ನೋಸ್ಟಿಕ್ ನಡೆಸಿದ ಬಳಿಕ ಸಮೀಕ್ಷೆ ಆಧಾರದ ಮೇಲೆ ವರದಿಯೊಂದು ಪ್ರಕಟವಾಗಿದೆ. ಅನಿಮಿಯಾ ಸಮಸ್ಯೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲದೇ, ಮಕ್ಕಳಲ್ಲೂ ಕಂಡು ಬರುವ ಸಮಸ್ಯೆ. ವಯಸ್ಸಾಗುತ್ತಿದ್ದಂತೆ ಅನಿಮಿಯಾ ಸಮಸ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

2016 ಹಾಗೂ ಮಾರ್ಚ್‌ 2019ರ ಮಧ್ಯೆದಲ್ಲಿ ದೇಶಾದ್ಯಂತ ಎಸ್‌ಆರ್‌ಎಲ್‌ ಪ್ರಯೋಗಾಲಯದಲ್ಲಿ ಹಿಮೋಗ್ಲೋಬಿನ್ ಅಂಶ ಪತ್ತೆ ಹಚ್ಚಲಾಗಿದೆ. ಈ ಆಧಾರದ ಮೇಲೆ ಸಮೀಕ್ಷೆ ಫಲಿತಾಂಶ ಕಂಡು ಹಿಡಿಯಲಾಗಿದೆ. ಎಸ್‌ಆರ್‌ಎಲ್‌ ವರದಿ ಪ್ರಕಾರ, 80 ವಯಸ್ಸಿಗಿಂತ ಅಧಿಕ ಪ್ರತಿಶತ 91ರಷ್ಟು ವ್ಯಕ್ತಿಗಳು, 61- 81 ವಯಸ್ಸಿನ ಶೇ. 81 ರಷ್ಟು ಮಂದಿ, 46- 60 ವಯಸ್ಸಿನ ಶೇ.69 ವ್ಯಕ್ತಿಗಳು, 31-45 ವಯಸ್ಸಿನ ಶೇ.59 ಮಂದಿ, 16- 30 ವಯಸ್ಸಿನ ಶೇ. 57 ಜನರು, ಅದರಂತೆ 0-15 ವಯಸ್ಸಿನ ಪ್ರತಿಶತ 53ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇನ್ನೂ 45 ವಯಸ್ಸಿನ ರೋಗಿಗಳಲ್ಲಿ ರಕ್ತ ಹೀನತೆ ಹೆಚ್ಚಾಗಿ ಕಂಡು ಬಂದಿವೆ.

ಎಸ್‌ಆರ್‌ಎಲ್‌ ಡಯಾಗ್ನೋಸ್ಟಿಕ್‌ನ ಆರ್‌ & ಡಿ. ಎಂಡ್‌ ಆಣ್ವಿಕ ರೋಗಶಾಸ್ತ್ರದ ಡಾ.ಬಿಆರ್ ದಾಸ್ ಪ್ರಕಾರ, ಶರೀರದಲ್ಲಿ ಕಬ್ಬಿಣದ ಕೊರತೆಯಿಂದ ಅನಿಮಿಯಾ ಅಥವಾ ರಕ್ತಹೀನತೆಗೆ ಕಾರಣವಾಗುತ್ತದೆ. ಅಂದರೆ ಕೆಂಪು ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಮಟ್ಟವು ಕುಸಿಯುತ್ತದೆ. ಹಿಮೋಗ್ಲೋಬಿನ್ ಉತ್ಪಾದಿಸಲು ನಮ್ಮ ಶರೀರಕ್ಕೆ ಕಬ್ಬಿಣ ಅಗತ್ಯವಿದೆ. ರಕ್ತದಲ್ಲಿ ಸಾಕಷ್ಟು ಕಬ್ಬಿಣಾಂಶ ಇಲ್ಲದಿದ್ದರೆ. ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ದೊರೆಯುವುದಿಲ್ಲ. ಹಿಮೋಗ್ಲೋಬಿನ್ ಕಡಿಮೆಯಾದ್ರೆ, ನಮ್ಮ ದೇಹದ ಅಂಗಾಂಗಗಳಿಗೂ ಹಾನಿಯುಂಟು ಮಾಡುತ್ತದೆ. ಹಿಮೋಗ್ಲೋಬಿನ್ ಕಡಿಮೆಯಾದರೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಕ್ತ ಹೀನತೆಯಿಂದ ಬಳಲುತ್ತಿರುವರಲ್ಲಿ ಈ ಲಕ್ಷಣಗಳು ಕಂಡು ಬರಬಹುದು. ಉದಾ: ದಣಿವು, ತಲೆನೋವು, ಹೃದಯ ಬಡಿತ ಹೆಚ್ಚಳ, ನಿಶಕ್ತಿ, ಉಸಿರಾಟದ ತೊಂದರೆ ಇತ್ಯಾದಿ. ರಕ್ತಹೀನತೆ ಬಗ್ಗೆ ಸಾಕಷ್ಟು ಜನರಿದೆ ಗೊತ್ತೇ ಇರಲ್ಲ. ಆದ್ರೆ ಈ ಸಮಸ್ಯೆಯಿಂದ ಆದಷ್ಟು ಬೇಗನೆ ಹೊರ ಬರಬಹುದು. ಇದಕ್ಕೆ ಚಿಕಿತ್ಸೆ ಲಭ್ಯವಿದೆ. ಸೂಕ್ತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಉತ್ತಮ ಆಹಾರ, ಮಿಟಮಿನ್ ಸಿ ಹೆಚ್ಚಾಗಿರುವ ಆಹಾರ ಸೇವನೆ, ಕಬ್ಬಿಣದ ಪೂರಕವಾದ ಆಹಾರಗಳನ್ನು ಸೇವಿಸಬೇಕು. ಅನಿಮಿಯಾದಿಂದ ಬಳಲುತ್ತಿರುವವರು ಹೆಚ್ಚಿನ ಗ್ಲುಟೆನ್ ಆಹಾರ ಸೇವಿಸಬಾರದು. ಗೋಧಿ ಬಾರ್ಲಿಯಂಥ ಆಹಾರಗಳು ಹಾನಿಯುಂಟು ಮಾಡುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದಾಂದ್ಯತ ಸುಮಾರು 2 ಶತಕೋಟಿ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರಲ್ಲಿ ಕಬ್ಬಿಣದ ಕೊರತೆ ಕಂಡು ಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv