ಸೈಜ್​ ಚಿಕ್ಕದಾದ್ರೂ, ತೂಕ ಕಡಿಮೆ ಮಾಡೋದ್ರಲ್ಲಿ ಹೆಸರುಬೇಳೆ ಎತ್ತಿದ ಕೈ..!

ಅಯ್ಯೋ ನಾನು ತುಂಬಾ ದಪ್ಪ ಆಗಿದ್ದೀನಿ. ಹೇಗಾದ್ರೂ ತೂಕ ಕಡಿಮೆ ಮಾಡ್ಲೇಬೇಕು ಅಂತಾ ಅದೆಷ್ಟೋ ಮಂದಿ ಡಯೆಟ್​ ಹೆಸರಲ್ಲಿ ಊಟ ಬಿಟ್ಟು ಖಾಲಿ ಹೊಟ್ಟೆಯಲ್ಲಿ ಮಲಗ್ತಾರೆ. ಇನ್ನು ಕೆಲವರಿಗಂತೂ ತೂಕ ಏನೋ ಕಡಿಮೆ ಮಾಡ್ಬೇಕು, ಆದ್ರೆ ನನ್ನ ನೆಚ್ಚಿನ ತಿಂಡಿ-ತಿನಿಸು ಮಾತ್ರ ಬಿಡೋಕೆ ಆಗಲ್ಲ. ಆ ಸೊಪ್ಪು-ತರಕಾರಿ ಯಾರಪ್ಪಾ ತಿಂತಾರೆ ಅನ್ನೋ ಚಿಂತೆ. ಹಾಗಂತ ದೇಹದ ತೂಕ, ಫಿಟ್​​ನೆಸ್​​ ಮೇಂಟೇನ್​​​​ ​ಮಾಡೋಕೆ ಇಲ್ಲ-ಸಲ್ಲದೆಲ್ಲ ತಿನೋಕೆ ಹೋದ್ರೆ ಆರೋಗ್ಯಕ್ಕೆ ಹಾನಿ.

ಹೆಸರುಬೇಳೆ ನೋಡೋಕೆ ಪುಟ್ಟ-ಪುಟ್ಟದಾಗಿದ್ರೂ, ಅದ್ರ ಹೆಲ್ತ್​ ಬಿನಿಫಿಟ್ಸ್​ ಮಾತ್ರ ಸೂಪರ್​. ಹೆಸರುಬೇಳೆಯಲ್ಲಿ ಅತೀ ಹೆಚ್ಚು ಪೌಷ್ಠಿಕಾಂಶವಿದೆ. ಹಾಗಾಗಿ ತೂಕ ಕಡಿಮೆ ಮಾಡುವುದರ ಜೊತೆಗೆ ನಿಮ್ಮನ್ನು ಆರೋಗ್ಯವಾಗಿಡುವಲ್ಲಿ ಹೆಸರುಬೇಳೆ ಸಹಕಾರಿ.

ಹೆಸರುಬೇಳೆ ಕ್ವಾಲಿಟಿಗಳು:
1. ಪುಟ್ಟದಾಗಿದ್ರೂ ಹೆಸರುಬೇಳೆ ಸಾಕಷ್ಟು ಪೌಷ್ಠಿಕಾಂಶ ಹೊಂದಿದೆ. ಹೆಸರುಬೇಳೆಯಲ್ಲಿ ಅಮೈನೋ ಆ್ಯಸಿಡ್​ ಅಂಶಗಳಿವೆ. ಇದು ಕೋಶಗಳು ಮತ್ತು ಮಾಂಸಖಂಡಗಳನ್ನು ವೃದ್ಧಿಪಡಿಸಿ ದೇಹದಲ್ಲಿರುವ ಬೇಡವಾದ ಕೊಬ್ಬಿನಾಂಶವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ.

2. ಹೆಸರುಬೇಳೆಯನ್ನ ನಾವು ನಮ್ಮ ಡಯೆಟ್​ನಲ್ಲಿ ಸುಲಭವಾಗಿ ಸೇರಿಬಹುದು.ಯಾಕಂದ್ರೆ  ಡಯೆಟ್​​ಗಾಗೇ ಉತ್ತರ ಭಾರತ ಹಾಗೂ ದಕ್ಷಿಣ ಭಾಗದ ಜನರು ಸಾಮಾನ್ಯವಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಇದನ್ನ ಬಳಸುತ್ತಾರೆ. ರೂಪ ಬೇರೆ ಬೇರೆಯಾದ್ರು ಅದ್ರಿಂದ ಸಿಗುವ ಪೌಷ್ಠಿಕಾಂಶ ಮಾತ್ರ ಒಂದೇ. ಹೆಸರುಬೇಳೆಯಿಂದ ಕಿಚಿಡಿ ತಯಾರಿಸಬಹುದು, ಇಲ್ಲವಾದಲ್ಲಿ ದಾಲ್​ ಪರಾಟ ಮಾಡಬಹುದು.  ನೆನೆಸಿಟ್ಟ ಹೆಸರುಬೇಳೆಯಿಂದ ಇಡ್ಲಿಯನ್ನು ಕೂಡ ತಯಾರಿಸಬಹುದು. ಡಯೆಟ್​ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡದೆ ದೇಹದ ತೂಕವನ್ನು ಕಡಿಮೆ ಮಾಡಬಹುದು.

3. ಹೆಸರುಬೇಳೆಯಲ್ಲಿ ಸಾಲ್ಯುಬಲ್​ ಹಾಗೂ ಇನ್​ಸಾಲ್ಯುಬಲ್​​​​ ಫೈಬರ್ ಅಂಶ​ ಹೆಚ್ಚಾಗಿವೆ. ಸಾಲ್ಯುಬಲ್ ಫೈಬರ್​​ ದೇಹಕ್ಕೆ ಬೇಕಾಗುವಂತ ನೀರಿನಂಶವನ್ನು ಹೆಚ್ಚಾಗಿ ಸಂಗ್ರಹಿಸುತ್ತೆ. ಅದಲ್ಲದೆ ದೇಹಕ್ಕೆ ಬೇಡವಾದ ಅಂಶಗಳನ್ನು ದ್ರವ್ಯಾಂಶದ ಮೂಲಕ ಹೊರಹಾಕಲು ಇದು ಸಹಕಾರಿಯಾಗಿದೆ. ಹೆಸರುಬೇಳೆಯಲ್ಲಿ ಮೆಗ್ನೀಶಿಯಂ, ಕಾಪರ್​, ಪೊಟಾಷಿಯಂ ಸೇರಿದಂತೆ ಉತ್ತಮ ಪೌಷ್ಠಿಕಾಂಶಗಳಿವೆ.

4. ಹೆಸರು ಬೇಳೆ  ರೋಗಗಳನ್ನ ಗುಣಮುಖವಾಗಿಸಲು ಸಹಕರಿಸುತ್ತೆ. ಜೀರ್ಣಾಕ್ರಿಯೆ ತೊಂದರೆ, ಡೈಯೇರಿಯಾ, ಅಸಿಡಿಟಿ, ಸೋಂಕು, ಜ್ವರದ ತೊಂದರೆಗಳಿರುವಾಗ ಹೆಸರುಬೇಳೆಯಿಂದ ಕಿಚಿಡಿ ತಯಾರಿಸಿ ಸೇವಿಸುವುದ್ರಿಂದ ಬೇಗ ಗುಣಮುಖರಾಗಬಹುದು. ಅದಲ್ಲದೆ ಸರ್ಜರಿ ವೇಳೆ ಕಿಚಿಡಿ ಸೇವನೆ ಮಾಡಲು ಸ್ವತಃ ವೈದ್ಯರೇ ಸಲಹೆ ನೀಡುತ್ತಾರೆ.