ಹಾವೇರಿ: ಮೂಕಪ್ಪ ಮಹಾಸ್ವಾಮಿ ವಿಧಿವಶ

ಹಾವೇರಿ: ಗುಡ್ಡದ ಮಲ್ಲಾಪುರ ಮಠದ ಹಿರಿಯರಾದ ಮೂಕಪ್ಪ ಸ್ವಾಮಿಗಳು ಇನ್ನಿಲ್ಲ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಸುಕ್ಷೇತ್ರ ಗುಡ್ಡದ ಮಲ್ಲಾಪುರದ ಮೂಕಪ್ಪ ಸ್ವಾಮೀಜಿಯೆಂದೇ ನಂದಿಯನ್ನು ಪೂಜಿಸಲಾಗುತ್ತಿತ್ತು. ಮಠದ ಪೀಠಾಧಿಪತಿಯಾಗಿದ್ದ ನಂದಿಯನ್ನು ಮೂಕಪ್ಪ ಸ್ವಾಮೀಜಿಗಳೆಂದೇ ಭಕ್ತರು ಕರೆಯುತ್ತಿದ್ದರು. ನಿನ್ನೆ ಸಂಜೆ 7.50 ಸುಮಾರಿಗೆ ಶಿವಾಧೀನರಾದ ಮೂಕಪ್ಪ ಸ್ವಾಮೀಜಿ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮೂಕಪ್ಪ ಸ್ವಾಮಿಯ ಅಂತಿಮ ದರ್ಶನಕ್ಕಾಗಿ ಸಾವಿರಾರು ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ.

 

Leave a Reply

Your email address will not be published. Required fields are marked *