ಜೀವದ ಹಂಗು ತೊರೆದು ಮರಿಯ ರಕ್ಷಿಸಿಕೊಂಡ ಮಂಗಗಳು..!

ಚಿತ್ರದುರ್ಗ: ವಿದ್ಯುತ್​ ಟ್ರಾನ್ಸ್​ಫಾರ್ಮರ್​ ಕಟಕಟೆಯೊಳಗೆ ಬಿದ್ದಿದ್ದ ಮಂಗದ ಮರಿಯನ್ನ, ಜೀವದ ಹಂಗು ತೊರೆದು ಸ್ವತಃ ಕೋತಿಗಳೇ ರಕ್ಷಣೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇಲ್ಲಿನ, ಎಸ್​​ಜೆಎಂ ಡೆಂಟಲ್​ ಕಾಲೇಜು ಆವರಣದಲ್ಲಿದ್ದ ವಿದ್ಯುತ್ ಟ್ರಾನ್ಸ್​ಫಾರ್ಮರ್​ ಮೇಲೆ ಮಂಗದ ಮರಿ ಸಿಲುಕಿತ್ತು. ಮಂಗದ ಮರಿಯು ಆಯತಪ್ಪಿ ಟ್ರಾನ್ಸ್​ಫಾರ್ಮರ್​ ಮೇಲೆ ಬಿದ್ದಿತ್ತು. ಇದನ್ನು ಗಮನಿಸಿದ ಪೋಷಕ ಕೋತಿಗಳು ತನ್ನ ಕರುಳ ಬಳ್ಳಿಯನ್ನ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv