ಶಾಲಾ ಬಾಲಕನ ಕಚ್ಚಿದ ಮಂಗ: ಇಂಜೆಕ್ಷನ್ ಸಿಗದೇ ಪರದಾಟ

ಚಿತ್ರದುರ್ಗ: ಶಾಲೆಯಿಂದ ವಾಪಸಾಗುವ ವೇಳೆ ಬಾಲಕನ ಮೇಲೆ ಕಪಿ ದಾಳಿ ಮಾಡಿದ ಘಟನೆ ಹೊಸದುರ್ಗ ಪಟ್ಟಣದ ವಿದ್ಯಾವಾಹಿನಿ ಶಾಲೆಯ ಮುಂಭಾಗದಲ್ಲಿ ನಡೆದಿದೆ. ತನ್ಮಯ್ ಎಂಬ ವಿದ್ಯಾರ್ಥಿಗೆ ಮಂಗಗಳು ಕಚ್ಚಿದ್ದು, ತಲೆ ಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ತನ್ಮಯ್ ಕಪಿ ದಾಳಿಗೊಳಗಾಗಿ ರಸ್ತೆಯಲ್ಲಿ ಅಳುತ್ತ ನಿಂತಿದ್ದ. ಆತನನ್ನು ಮಂಜುನಾಥ್ ಎನ್ನುವವರು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಮಂಗಗಳು ಕಚ್ಚಿದಾಗ ರಾಬಿ ಷಿಲ್ಡ್ ಎಂಬ ಇಂಜೆಕ್ಷನ್ ನೀಡಲಾಗುತ್ತದೆ. ತನ್ಮಯ್​ನನ್ನು ದಾಖಲಿಸಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಇಂಜೆಕ್ಷನ್ ಲಭ್ಯವಿಲ್ಲ ಅಂತಾ ಹೇಳಲಾಗ್ತಿದೆ. ಇದರಿಂದ ಕೆಲಕಾಲ ಪೋಷಕರು ಪರದಾಡುವಂತಾಗಿತ್ತು.
ಕೊನೆಗೆ ₹ 4 ಸಾವಿರ ಕೊಟ್ಟು ಹೊರಗಿನಿಂದ ಇಂಜೆಕ್ಷನ್ ತಂದು ಚಿಕಿತ್ಸೆ ನೀಡಲಾಗಿದ್ದು, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಶಾಲೆ ಇರುವ ಪ್ರದೇಶದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತಂತೆ ಬಿಇಓ ಗಮನಹರಿಸಿ ವಿದ್ಯಾರ್ಥಿಗಳ ಮೇಲಾಗುತ್ತಿರುವ ಕಪಿ ದಾಳಿಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು. ಮಂಗಗಳನ್ನು ಹಿಡಿಯಲು ಪುರಸಭೆಗೆ ದೂರು ನೀಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv