ಚುನಾವಣಾಧಿಕಾರಿಗಳ ದಾಳಿ: ಬಿಜೆಪಿ ನಾಯಕನ ಮನೆಯಲ್ಲಿ ಹಣ, ವೋಟರ್ ಐಡಿಗಳು ಪತ್ತೆ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ, ಬಿಜೆಪಿ ನಾಯಕ ವೇಣುಗೋಪಾಲ್ ಮನೆ ಮೇಲೆ ಇಂದು ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮನೆಯಲ್ಲಿ 80 ವೋಟರ್ ಐಡಿಗಳು ಹಾಗೂ ದಾಖಲೆ ಇಲ್ಲದೆ ₹1.50 ಲಕ್ಷ ನಗದು ಹಣ ಪತ್ತೆಯಾಗಿದೆ. ಈ ಹಿನ್ನೆಲೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಎನ್​ಸಿಆರ್ ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳು ಹಣ ಹಾಗೂ ವೋಟರ್​ ಐಡಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು,  ನಗರದ  ಕೆಜಿ ರಸ್ತೆಯಲ್ಲಿರುವ ಪ್ರಭಾತ್ ಕಾಂಪ್ಲೆಕ್ಸ್​ನಲ್ಲಿರುವ ಇಬ್ರಾಹಿಂ ಖಲೀಲುಲ್ಲಾ ಅನ್ನೋವ್ರಿಗೆ ಸೇರಿದ ಕಚೇರಿಯಲ್ಲಿ ಚುನಾವಣಾ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮತದಾರರಿಗೆ ಸುಲಭವಾಗಲು ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಇಬ್ರಾಹಿಂ ಖಲೀಲುಲ್ಲಾ ಕಚೇರಿ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಸಿಬ್ಬಂದಿ ಹೇಳಿಕೆಯ ಮೇಲೆ ಅಧಿಕಾರಿಗಳಿಗೆ ಅನುಮಾನ ಮೂಡಿರೋದ್ರಿಂದ,  ಕಚೇರಿ ಸಿಬ್ಬಂದಿಯನ್ನ ವಿಚಾರಣೆ ನಡೆಸುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv