ಈಗ್ಲೇ ನೋಡಿ ಬಿಡಿ..ಈ ಪೇಂಟಿಂಗ್ ಬೆಲೆ ಜಸ್ಟ್ 800 ಕೋಟಿ ರೂಪಾಯಿ..!

ಯಾವುದೋ ಭಾವ ಲಹರಿಯಲ್ಲಿ ಕುಂಚ ಹಿಡಿದ ಕಲಾವಿದ ತನ್ನ ಒಡಲಾಳದ ಸಂವೇದನೆಗಳನ್ನು ಚಿತ್ರದ ಮೂಲಕ ಅರಳಿಸುತ್ತಾನೆ. ಪೇಂಟಿಂಗ್​ನಲ್ಲಿ ಮೂಡಿಸಿದ ಕಲ್ಪನೆಯ ಸಣ್ಣದೊಂದು ಚಿತ್ರ ಅದ್ಭುತ ಎನಿಸಿಕೊಳ್ಳೋದು ವಿಮರ್ಶೆಗಳು ಬಂದಾಗಲೇ. ಒಂದು ಉತ್ತಮ ವಿಮರ್ಶೆ ಆ ಚಿತ್ರದ ಮೌಲ್ಯವನ್ನ ಹೆಚ್ಚಿಸುತ್ತೆ.. ಜೊತೆಗೆ ನೋಡುಗರ ಇಂಪ್ರೆಸ್​ ಮಾಡಿದ ಚಿತ್ರವೊಂದು ಕಲಾವಿದನ ಜನಪ್ರಿಯತೆಯನ್ನೂ ಹೆಚ್ಚಿಸುತ್ತದೆ. ಅದೇನೇ ಇರಲಿ, ಅಮೆರಿಕಾದ ನ್ಯೂಯಾರ್ಕ್​ನಲ್ಲಿ ಮೊನ್ನೆ ಪೇಟಿಂಗ್ ಒಂದು ಬರೋಬ್ಬರಿ 7,78,61,39,850 (USD 110.7 million) ರೂಪಾಯಿಗೆ ಹರಾಜಾಗಿದೆ!

ಪ್ರಸಿದ್ಧ ಫ್ರೆಂಚ್​​ ಪೇಂಟರ್​ ಕ್ಲ್ಯಾವುಡೇ ಮೊನೆಟ್​ ಬಿಡಿಸಿರುವ ಈ ಚಿತ್ರಕ್ಕೆ ‘Meules’ ಎಂದು ಹೆಸರಿಡಲಾಗಿದೆ. 1890ರಲ್ಲಿ ಮೊನೆಟ್​ ಕುಂಚದಲ್ಲಿ ಇದನ್ನು ಚಿತ್ರಿಸಿದ್ದರು. ಹುಲ್ಲಿನ ಬಣಿವೆಯೊಂದು  ಪ್ರಮುಖವಾಗಿ ಕಾಣುವ ಚಿತ್ರದ ಕೆಳಗೆ ಹಸಿರು ಹಾಸಿನ ಹುಲ್ಲು ಆವರಿಸಿಕೊಂಡಿದೆ. ಇದಕ್ಕೆ ಸೂರ್ಯಾಸ್ತದ ಬೆಳಕು ಚಿತ್ರದ ಮೇಲೆ ಬಿದ್ದಿದ್ದು, ಅದ್ಭುತವಾಗಿ ಕಾಣುತ್ತಿದೆ.

1986 ರಲ್ಲಿಯೂ ಈ ಚಿತ್ರ ಹರಾಜು ಆಗಿತ್ತು. ಈಗ ಒಟ್ಟು 8 ನಿಮಿಷಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಚಿತ್ರ ಬರೋಬ್ಬರಿ 7,78,61,39,850 ರೂಪಾಯಿಗೆ ಹರಾಜು ಆಗಿದೆ. ಒಟ್ಟು 6 ಬಿಡ್ಡರ್​​ ಇದರಲ್ಲಿ ಭಾಗವಹಿಸಿದ್ದರು. ಮೊನೆಟ್​ ಪೇಂಟಿಂಗ್​ನಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಸೇಲ್ ಆಗಿರುವ ಚಿತ್ರದಲ್ಲಿ ಇದು ಮೊದಲನೇ ಸ್ಥಾನದಲ್ಲಿದೆ. ಈ ಪ್ರಸಿದ್ಧ ಕಲಾವಿದ ತಮ್ಮ 86ನೇ ವಯಸ್ಸಿಗೆ ಅಂದರೆ 1926ರಲ್ಲಿ ಮೃತಪಟ್ಟಿದ್ದಾರೆ. French Impressionism ಅನ್ನೋ ಕಲಾ ಸಂಸ್ಥೆಯ ಸಂಸ್ಥಾಪಕ ಕೂಡ ಆಗಿದ್ದಾರೆ.

 

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv