ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಚಾಲನೆ, ಆಡಿ ಕಾರು ಪೀಸ್​​​ ಪೀಸ್..!

ಕುಡಿದ ಅಮಲಿನಲ್ಲಿ ಆಡಿ ಕಾರು ಚಾಲಕನ್ನೊಬ್ಬ ರಸ್ತೆ ನಿಯಂತ್ರಣ ಬೊಲಾರ್ಡ್​ಗೆ ವೇಗವಾಗಿ ಬಂದು ಗುದ್ದಿದ್ದಾನೆ. ಡಿಕ್ಕಿಯಾದ ರಬಸಕ್ಕೆ ಕಾರು ಆಳೆತ್ತರಕ್ಕೆ ಜಿಗಿದು ನೆಲಕ್ಕೆ ಅಪ್ಪಳಿಸಿದೆ. ಪರಿಣಾಮ ಆಡಿ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಘಟನೆ ಬೆಲ್ಜಿಯಂನ ಪೊಲೀಸ್​ಟೌನ್​​ ರೋಸೆಲೆರ್​ನಲ್ಲಿ ನಡೆದಿದೆ. ಇನ್ನು, ಆಡಿ ಕಾರು ಜಖಂಗೊಂಡಿರುವ ದೃಶ್ಯ ಈಗ ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು, ಆಡಿ ಕಾರು ಚಾಲಕ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಡಿರುವ ಬಗ್ಗೆ ಚಾಲಕ ನಂಬಲಿಲ್ಲ. ಕೊನೆಗೂ ಆತ ಕಂಠಪೂರ್ತಿ ಕುಡಿದಿದ್ದು ಮನವರಿಕೆ ಮಾಡಿದ ಮೇಲೆ ಒಪ್ಪಿಕೊಂಡಿದ್ದಾನೆ.