ಏನಿದು ನಲಪಾಡ್ ಪ್ರಕರಣ..?

ಬೆಂಗಳೂರು: 116 ದಿನಗಳಿಂದ ಜೈಲುವಾಸದಲ್ಲಿರುವ ಕಾಂಗ್ರೆಸ್​ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್​ ನಲಪಾಡ್​, ಫೆಬ್ರವರಿ 17ರಂದು ಫರ್ಜಿಕೆಫೆಗೆ ಭೇಟಿಕೊಟ್ಟಿದ್ದ. ಅಲ್ಲಿ ಉದ್ಯಮಿ ಲೋಕನಾಥ್​ ಪುತ್ರ ವಿದ್ವತ್​ ಮೆಲೆ ಹಲ್ಲೆ ನಡೆಸಿದ್ದ ಎಂಬ ಆರೋಪದ ಮೇಲೆ ಜೈಲು ಸೇರಿದ್ದ. ಈ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಕೋರ್ಟ್​ಗೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸಿಸಿಬಿ ಇನ್​ಸ್ಪೆಕ್ಟರ್ ಅಶ್ವಥ್ ಗೌಡ ನೇತೃತ್ವದಲ್ಲಿ ವಿಚಾರಣೆ ನಡೆದಿತ್ತು.

ಜಾಮೀನು ನಿರಾಕರಿಸಿದ್ದು 3 ಬಾರಿ
ಸೆಷನ್ಸ್ ಕೋರ್ಟ್​ನಲ್ಲಿ ಎರಡು ಬಾರಿ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಸೆಷನ್ ಕೊರ್ಟ್ ಆದೇಶ ಪ್ರಶ್ನಿಸಿ ನಲಪಾಡ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ ಹೈಕೋರ್ಟ್​ನಲ್ಲೂ ನಲಪಾಡ್ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು.

ಜಾಮೀನು ನಿರಾಕರಣೆಗೆ ಕಾರಣ ಏನು..?
ಆರೋಪಿ ನಲಪಾಡ್​, ಶಾಸಕ ಮೊಹಮ್ಮದ್ ಹ್ಯಾರಿಸ್​ ಪುತ್ರನಾಗಿರೋದ್ರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದೆಂದು ಈ ಹಿಂದೆ ಮೂರು ಬಾರಿ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಸದ್ಯ ಚಾರ್ಜ್​ಶೀಟ್ ಸಲ್ಲಿಕೆಯಾಗಿದ್ದು ಎಲ್ಲಾ ಸಾಕ್ಷಿಗಳ ಹೇಳಿಕೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ಕೊನೆಗೂ ಸಿಕ್ಕ ಜಾಮೀನು
ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ಇಂದಿಗೆ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ನಲಪಾಡ್​ಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 116 ದಿನಗಳಿಂದ ಜೈಲುವಾಸದಲ್ಲಿದ್ದ ನಲಪಾಡ್​ ಬಿಡುಗಡೆಯಾಗಲಿದ್ದಾನೆ.

ಪ್ರಕರಣದ ದಿನಾಂಕ ಮತ್ತು ವಿವರಣೆ
ಫೆ.17, 2018 : ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅಂಡ್ ಟೀಂನಿಂದ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಆರೋಪ.
ಫೆ.18, 2018 : ಬೆಂಗಳೂರು ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಲಪಾಡ್ ವಜಾ.
ಫೆ.19, 2018 : ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ನಲಪಾಡ್ ಶರಣಾಗತಿ. ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿ ವಿಚಾರಣೆ.
ಫೆ.21, 2018 : 14 ದಿನಗಳ ನ್ಯಾಯಾಂಗ ಬಂಧನಕ್ಕೆ ನಲಪಾಡ್. ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ.
ಫೆ.22, 2018 : ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಕುಟುಂಬದ ಜೊತೆ ರಾಜಿ ಸಂಧಾನಕ್ಕೆ ಶಾಸಕ ಹ್ಯಾರಿಸ್ ವಿಫಲ ಯತ್ನ.
ಫೆ.23, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ. ಆಕ್ಷೇಪಣೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿಕೆ.
ಫೆ.27, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ. ಮಾರ್ಚ್ 2 ಕ್ಕೆ ತೀರ್ಪು ಕಾಯ್ದಿರಿಸಿದ ಸೆಷನ್ಸ್ ಕೋರ್ಟ್.
ಮಾ.02, 2018 : ನಲಪಾಡ್ ಮತ್ತು 6 ಜನ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಸೆಷನ್ಸ್ ಕೋರ್ಟ್.
ಮಾ.05, 2018 : ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಲಪಾಡ್​ನಿಂದ ಹೈಕೋರ್ಟ್​ಗೆ ಮೇಲ್ಮನವಿ.
ಮಾ.07, 2018 : ಶೀಘ್ರ ಅರ್ಜಿ ಕೈಗೆತ್ತಿಕೊಳ್ಳುವಂತೆ ಮನವಿ. ಮನವಿ ತಳ್ಳಿ ಹಾಕಿದ ನ್ಯಾ.ಶ್ರೀನಿವಾಸ್​ ಹರೀಶ್​ ಕುಮಾರ್​. ಲಿಸ್ಟ್​ ಪ್ರಕಾರ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೆ ಕಾಯಿರಿ ಎಂದ ನ್ಯಾಯಮೂರ್ತಿ.
ಮಾ.09, 2018 : ಸುದೀರ್ಘ ಮೂರು ಗಂಟೆಗಳ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್.
ಮಾ.12, 2018 : ವಾದ ಪ್ರತಿವಾದ ಆಲಿಸಿ ನಲಪಾಡ್ ಜಾಮೀನು ಅರ್ಜಿ ವಿವಾರಣೆ ಪೂರ್ಣಗೊಳಿಸಿ ಮಾರ್ಚ್ 14ಕ್ಕೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.
ಮಾ.14, 2018 : ಮೇಲ್ನೋಟಕ್ಕೆ ನಲಪಾಡ್ ಕ್ರೂರತೆ ಸಾಬೀತು ಅಂತ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ. ಸೆಷನ್ಸ್ ಕೋರ್ಟ್, ಹೈಕೋರ್ಟ್ ಆದೇಶ ಪ್ರಶ್ನಿಸಲು ಅವಕಾಶವಿದ್ರೂ  ತಮ್ಮ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿದ್ದ ಹಿನ್ನಲೆ ಸುಪ್ರೀಂ ಕೋರ್ಟ್​ ಕದ ತಟ್ಟದಿರಲು ನಿರ್ಧರಿಸಿದ ಶಾಸಕ ಹ್ಯಾರಿಸ್.
ಮೇ.01, 2018 : ನಲಪಾಡ್ ಅಂಡ್ ಟೀಂ ವಿರುದ್ಧ ನ್ಯಾಯಾಲಯಕ್ಕೆ 600ಕ್ಕೂ‌ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ ಪೊಲೀಸರು.
ಮೇ.16, 2018 : ಮತ್ತೆ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ನಲಪಾಡ್​ನಿಂದ ಅರ್ಜಿ. ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಸರ್ಕಾರಕ್ಕೆ ನೋಟಿಸ್.
ಮೇ.19, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ, ನಲಪಾಡ ಪರ ವಕೀಲರ ವಾದ ಮಂಡನೆ.
ಮೇ.24, 2018 : ನಲಪಾಡ್ ಜಾಮೀನು ಅರ್ಜಿಗೆ 396 ಪುಟಗಳ ಆಕ್ಷೇಪಣೆ ಸಲ್ಲಿಸಿದ SPP ಎಂ.ಎಸ್. ಶ್ಯಾಂ ಸುಂದರ್.
ಮೇ.28, 2018 : ನಲಪಾಡ್ ಪರ ವಕೀಲ ಉಸ್ಮಾನ್​ರಿಂದ ವಾದ, SPP ಎಂ.ಎಸ್. ಶ್ಯಾಂ ಸುಂದರ್ ರಿಂದ ಪ್ರತಿವಾದ.                                                                                                                          ಮೇ.29, 2018 : ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ. ಅಂತಿಮ ತೀರ್ಪನ್ನು ಮೇ 30 ಮಧ್ಯಾಹ್ನ 2.30ಕ್ಕೆ ಕಾದಿರಿಸಿದ ನ್ಯಾ. ಪರಮೇಶ್ವರ ಪ್ರಸನ್ನ.ಬಿ
ಮೇ.30, 2018 : ನಲಪಾಡ್​ಗೆ ಜಾಮೀನು ಮಂಜೂರು ಮಾಡದ 63ನೇ ಸಿಟಿ ಸಿವಿಲ್ ಕೋರ್ಟ್.
ಜೂ.01,2018 : ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ನಲಪಾಡ್​ ವಕೀಲ ಮೇಲ್ಮನವಿ ಅರ್ಜಿ ಸಲ್ಲಿಕೆ.
ಜೂ.06,2018 : ಹೈಕೋರ್ಟ್​ನಲ್ಲಿ ನಲಪಾಡ್ ಅರ್ಜಿ ವಿಚಾರಣೆ ಆರಂಭ. SPPಗೆ ನೋಟಿಸ್.
ಜೂ.13,2018 : SPPಯಿಂದ ಆಕ್ಷೇಪಣೆ ಸಲ್ಲಿಕೆ. ವಾದ ಪ್ರತಿವಾದ ಮುಕ್ತಾಯ. ಜೂನ್ 14ಕ್ಕೆ ಅಂತಿಮವಾಗಿ ಇಂದು ಷರತ್ತು ಬದ್ಧ ಜಾಮೀನು ನೀಡಿ ತೀರ್ಪು ನೀಡಿದ ಹೈಕೋರ್ಟ್.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv