ನಲಪಾಡ್​ಗೆ ಜಾಮೀನೇನೋ ಸಿಕ್ತು, ಹೊರಗೆ ಬರೋಕೆ ಏನೇನು ಮಾಡಬೇಕು?!

ಬೆಂಗಳೂರು: ಮಹಮದ್​ ನಲಪಾಡ್ ಫೆಬ್ರವರಿ 17ರಂದು ಫರ್ಜಿಕೆಫೆಯಲ್ಲಿ ಉದ್ಯಮಿ ಲೋಕೇಶ್​ ಪುತ್ರ ವಿದ್ವತ್​ ಮೇಲೆ ಹಲ್ಲೆ ಮಾಡಿದ್ದನೆಂಬ ಆರೋಪ ಹಿನ್ನೆಲೆ ಜೈಲು ಸೇರಿದ್ದ. 116 ದಿನಗಳ ಕಾಲ ಜೈಲಿನಲ್ಲಿದ್ದ ಕಾಂಗ್ರೆಸ್​ ಶಾಸಕ ಎನ್​ಎ ಹ್ಯಾರಿಸ್ ಪುತ್ರ ಮಹಮದ್​ ನಲಪಾಡ್​ಗೆ ಇಂದು ಹೈಕೋರ್ಟ್​ ಜಾಮೀನು ನೀಡಿದೆ. ಆದ್ರೆ ಜಾಮೀನು ಸಿಕ್ಕ ತಕ್ಷಣ ಆತ ಹೊರಗೆ ಬರೋಕೆ ಆಗಲ್ಲ. ಅದಕ್ಕೂ ಮುನ್ನ ಈ ಕೆಳಕಂಡ ಪ್ರೊಸಿಜರ್ ಅನ್ನು ಆತನ ಪರ ವಕೀಲರು ಪೂರೈಸಬೇಕಾಗುತ್ತೆ.

 ಏನೆಲ್ಲ ಮಾಡಬೇಕು?

1. ಮೊದಲು ಹೈಕೋರ್ಟ್ ಆದೇಶದ ಪುತ್ರಿ ನಲಪಾಡ್ ಪರ ವಕೀಲರ ಕೈ ಸೇರಬೇಕು.
2. ನಂತರ ನಲಪಾಡ್​ಗೆ ಹೈಕೋರ್ಟ್​ ವಿಧಿಸಿರುವ ಷರತ್ತುಗಳನ್ನು ಗಮನಿಸಬೇಕು.
3. ವೈಯಕ್ತಿಕ ಬಾಂಡ್, ಭದ್ರತಾ ಶ್ಯೂರಿಟಿ ಸೇರಿ ಉಳಿದ ಷರತ್ತುಗಳನ್ನು ಪೂರೈಸಲು ಸಿದ್ದತೆ ಮಾಡಿಕೊಳ್ಳಬೇಕು.
4. ಬಳಿಕ ಸೆಷನ್ಸ್ ಕೋರ್ಟ್​ನಲ್ಲಿ ಷರತ್ತುಗಳನ್ನು ಪೂರೈಸಬೇಕು.
5. ಷರತ್ತು ಪರಿಶೀಲಿಸಿದ ಬಳಿಕ ಸೆಷನ್ಸ್ ಕೋರ್ಟ್ ಬಿಡುಗಡೆ ಆದೇಶದ ಪ್ರತಿಯನ್ನು ನೀಡಲಿದೆ.
6. ಬಿಡುಗಡೆ ಆದೇಶದ ಪತ್ರಿಯನ್ನು ಪರಪ್ಪನ ಅಗ್ರಹಾರ ಜೈಲ್ ತಲುಪಿಸಬೇಕು. ಕೋರ್ಟ್​​ ಆಮೀನ್ ಆದೇಶದ ಲಕೋಟೆಯನ್ನು ಹೋಗಿ ತಲುಪಿಸಬೇಕು.
7. ಬಿಡುಗಡೆ ಆದೇಶದ ಪತ್ರಿಯನ್ನು ಜೈಲರ್ ಪರಿಶೀಲಿಸಿ, ಪ್ರತಿ ಪಡೆದ 15 ನಿಮಿಷಗಳಲ್ಲಿ ಬಿಡುಗಡೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಾರೆ.
8. ಈ ವೇಳೆ ಪ್ರಿಸನರ್ಸ್​​​​​ ಪ್ರಾಪರ್ಟಿ ಹಾಗೂ ಕ್ಯಾಶ್ ಬಗ್ಗೆ ಚೆಕ್​ ಮಾಡಿ, ಆತನಿಗೆ ಹಿಂದಿರುಗಿಸುತ್ತಾರೆ. ಇದೇ ಸಮಯದಲ್ಲೇ ಜಾಮೀನು ಬಾಂಡ್​​ಮೇಲೆ ಆತನಿಂದ ಸಹಿ ಪಡೆಯುತ್ತಾರೆ.

ಇಷ್ಟೆಲ್ಲಾ ಪ್ರಕ್ರಿಯೆಗಳು ಮುಗಿದು, ಬಹುತೇಕ ಇಂದು ಸಂಜೆ ನಲಪಾಡ್​ ಜೈಲಿನಿಂದ ಹೊರ ಬರಲಿದ್ದಾನೆ ಎಂದು ತಿಳಿದುಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv