ಜಾಮೀನು ಸಿಕ್ಕಿದ್ದಕ್ಕೆ ಜೈಲ್​ನಲ್ಲಿ ನಲಪಾಡ್​ ಭರ್ಜರಿ ಡಾನ್ಸ್​!

ಬೆಂಗಳೂರು: ಮಹಮದ್​ ನಲಪಾಡ್ ಫೆಬ್ರವರಿ 17ರಂದು ಫರ್ಜಿಕೆಫೆಯಲ್ಲಿ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್​ ಮೇಲೆ ಹಲ್ಲೆ ಮಾಡಿದ್ದನೆಂಬ ಆರೋಪ ಹಿನ್ನೆಲೆಯಲ್ಲಿ ಜೈಲು ಸೇರಿದ್ದ. 116 ದಿನಗಳ ಕಾಲ ಜೈಲಿನಲ್ಲಿದ್ದ ಕಾಂಗ್ರೆಸ್​ ಶಾಸಕ ಎನ್​ಎ ಹ್ಯಾರಿಸ್ ಪುತ್ರ ಮಹಮದ್​ ನಲಪಾಡ್​ಗೆ ಇಂದು ಹೈಕೋರ್ಟ್​ ಜಾಮೀನು ನೀಡಿದೆ.

ಜಾಮೀನು ಸಿಕ್ಕಿರುವ ಸುದ್ದಿ ತಲುಪುತ್ತಿದ್ದಂತೆ ಜೈಲಿನಲ್ಲಿ ನಲಪಾಡ್​ ಕುಣಿದು ಕುಪ್ಪಳಿಸಿದ್ದಾನೆ ಎನ್ನಲಾಗಿದೆ. ಸಹಚರರೊಂದಿಗೆ ಜೈಲಿನಲ್ಲಿಯೇ ಭರ್ಜರಿ ಡ್ಯಾನ್ಸ್ ಮಾಡಿ ಸಂತೋಷ ಪಟ್ಟಿದ್ದಾನೆ. ಅಂತೂ ಬೇಲ್ ಆಯ್ತು ಬಚಾವ್ ಆದ್ವಿ ಅಂತಾ ನಲಪಾಡ್ ನಿಟ್ಟುಸಿರು ಬಿಟ್ಟಿದ್ದಾನೆ. ಅಲ್ಲದೇ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ. ನಿಮಗೆ ಧನ್ಯವಾದಗಳು ಅಂತಾ ಜೈಲ್​ ಸಿಬ್ಬಂದಿಗೆ ಹೇಳಿದ್ದಾನೆ ಎನ್ನಲಾಗಿದೆ. ಜಾಮೀನು ಅರ್ಜಿ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಟಿವಿ ಮುಂದೆಯೇ ನಲಪಾಡ್​ ಕೂತಿದ್ದ. ಈಗ ಮನೆ ಸೇರುವ ಖುಷಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv