ಹೈಕೋರ್ಟ್​​ನಲ್ಲಿ ಇಂದು ನಲಪಾಡ್​ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ, ಮೊಹಮದ್‌ ನಲಪಾಡ್‌ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

 

ವಿಶೇಷ ಅಭಿಯೋಜಕ, ವಿದ್ವತ್​ ಪರ ವಕೀಲ ಶ್ಯಾಮಸುಂದರ್ ಅವರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಕಳೆದ ವಿಚಾರಣೆ ವೇಳೆ ಆಕ್ಷೇಪಣೆ ಸಲ್ಲಿಸಲು ಎಸ್.ಪಿ.ಪಿ ಶ್ಯಾಮಸುಂದರ್ ಸಮಯ ಕೇಳಿದ್ದರು.
ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ನಲಪಾಡ್​ಗೆ ಸೆಷನ್ಸ್​ ಕೋರ್ಟ್​​ನಲ್ಲಿ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ನಲಪಾಡ್ ಮತ್ತು ಗ್ಯಾಂಗ್​ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಜೂನ್​ 6ರಂದು ಮೊಹಮದ್‌ ನಲಪಾಡ್‌ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ, ವಿಚಾರಣೆಯನ್ನು ಜೂನ್‌ 11ಕ್ಕೆ ಮುಂದೂಡಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv