ನಲಪಾಡ್​ಗೆ ಹೈಕೋರ್ಟ್​​ ವಿಧಿಸಿರುವ ಷರತ್ತುಗಳೇನು?

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಕಾಂಗ್ರೆಸ್​ ಶಾಸಕ ಎನ್​​.ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್​​ಗೆ ಇಂದು ಜಾಮೀನು ಸಿಕ್ಕಿದೆ. ಆದ್ರೆ, ಕೆಲವು ಷರತ್ತುಗಳನ್ನು ವಿಧಿಸಿ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್​​ನ ಹಾಲ್​ ನಂಬರ್ 21ರಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ,  ಜಾಮೀನು ಮಂಜೂರು ಮಾಡಿದ್ರು.

ಹಲ್ಲೆಗೆ ಸಂಬಂಧಿಸಿದಂತೆ 116 ದಿನಗಳಿಂದ ಮಹಮದ್ ನಲಪಾಡ್ ಜೈಲಿನಲ್ಲಿದ್ದ, ಅಲ್ಲದೇ ಸತತ 4ನೇ ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದ. ಇನ್ನು ಆರೋಪಿ ಪರ ಬಿ.ವಿ. ಆಚಾರ್ಯ ವಾದ ಮಂಡಿಸಿದ್ದರೆ, ವಿದ್ವತ್ ಪರವಾಗಿ ಎಸ್​ಪಿ ಶ್ಯಾಂ ಸುಂದರ್ ವಾದ ಮಂಡಿಸಿದ್ದರು. ನಿನ್ನೆ ಮಧ್ಯಾಹ್ನ ಇಬ್ಬರ ವಾದ ಪ್ರತಿವಾದವನ್ನು ಕೋರ್ಟ್​ ಆಲಿಸಿತ್ತು, ಅಲ್ಲದೇ ಇಂದಿಗೆ ಆದೇಶವನ್ನು ಕೋರ್ಟ್​ ಕಾಯ್ದಿರಿಸಿತ್ತು. ಅದರಂತೆ, ಇಂದು ಹೈಕೋರ್ಟ್ ನ್ಯಾಯಮೂರ್ತಿ ಮೈಕಲ್ ಖುನ್ನಾ, ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಹಾಗಿದ್ದರೆ ಅವರು ವಿಧಿಸಿರೋ  ಷರತ್ತುಗಳು ಯಾವವು?

ಷರತ್ತುಗಳೇನು?
1. ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರುವಂತಿಲ್ಲ
2. ಎರಡು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು
3. ನಲಪಾಡ್ ಪಾಸ್​ಪೋರ್ಟ್ ಅನ್ನು ಕೋರ್ಟ್​ಗೆ ಸರಂಡರ್ ಮಾಡಬೇಕು
4. ಸಾಕ್ಷಿಗಳ ಸಂಪರ್ಕ ಮಾಡಬಾರದು

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv