ಮೋದಿ‌ ವಿರುದ್ಧ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ನಾಯಕಿ ವಾಗ್ದಾಳಿ

ಧಾರವಾಡ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಭೂತಮಟ್ಟದ ಅಧ್ಯಕ್ಷರು ಹಾಗೂ ಎಜೆಂಟರುಗಳಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ನಗರದ ನೌಕರರ ಭವನದಲ್ಲಿ ನಡೆದ ಶಿಬಿರದಲ್ಲಿ ಜಿಲ್ಲೆಯ ಭೂತ ಮಟ್ಟದ ಎಜೆಂಟರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ತರಬೇತಿ ಪಡೆದರು. ಇನ್ನು ಇದೇ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಲೋಕಸಭಾ ಕ್ಷೇತ್ರದ ಸೋಶಿಯಲ್ ಮೀಡಿಯಾ ಉಸ್ತುವಾರಿ ಮುಖ್ಯಸ್ಥೆಯಾಗಿರುವ ಲಾವಣ್ಯ ಬಲ್ಲಾಳ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕಾಂಗ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಬಿಜೆಪಿಯವರು ಕಮೆಂಟ್ ಮಾಡಲಾಗುತ್ತಿದೆ. ನಮ್ಮ ದೇಶದ ಬಗ್ಗೆ, ದೇಶದ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗೆ ಇಲ್ಲ. ಇವತ್ತು ದೇಶವನ್ನು ಬೆಳೆಸಲು ಕಾಂಗ್ರೆಸ್ ಮಾಡಿದ ತ್ಯಾಗದಿಂದ ದೇಶ ಇಲ್ಲದಿದ್ದರೆ ಇಷ್ಟು ಬೆಳೆಯುತ್ತಿರಲಿಲ್ಲ. ಚಂದ್ರನ ಅಂಗಳಕ್ಕೆ, ಮಂಗಳ ಗ್ರಹಕ್ಕೆ ಮೂರು ನೂರು ಕೋಟಿ ರೂಪಾಯಿಯಲ್ಲಿ ನಾವು ಹೋಗಿ ಬಂದಿದ್ದೇವೆ. ಆದ್ರೆ, ಮೋದಿಜಿ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ವಿದೇಶ ಸುತ್ತಾಡುತ್ತಿದ್ದಾರೆ. ಮಾತು ತೆಗೆದರೆ ಚಹಾ ಮಾರೋನು. ಹೀಗಾಗಿ ನನ್ನನ್ನ ಕಾಂಗ್ರೆಸ್ ಕೀಳಾಗಿ ನೋಡ್ತಾರೆ ಅಂತಾರೆ. ಮೋದಿ ಅವರು ಹೇಳುವಂತಹ ರೆಲ್ವೇ ಸ್ಟೇಷನ್ ಯಾರೂ ನೋಡಿಲ್ಲ. ಅವರು ಹೇಳಿದ್ದಕ್ಕೆ ಬಹಳ ವ್ಯತ್ಯಾಸ ಇದೆ. ಮೋದಿ ಹಾಕೋ ಸೂಟಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ ಅಂತಾ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.