ಬೆಂಗಳೂರು ಅಭ್ಯರ್ಥಿಗಳ ಪರ ಇಂದು ಮೋದಿ ಪ್ರಚಾರ

ಬೆಂಗಳೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ರಾಜ್ಯಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನಿನ್ನೆ ಕೊಪ್ಪಳದ ಗಂಗಾವತಿಗೆ ಆಗಮಿಸಿದ್ದ ಅವರು ಪ್ರಚಾರ ನಡೆಸಿದ್ರು. ಇಂದು ಸಂಜೆ 5:30ಕ್ಕೆ ನಗರದ ಅರಮನೆ ಮೈದಾನದಲ್ಲಿ ಮೋದಿ ‘ವಿಜಯ ಸಂಕಲ್ಪ’ ಯಾತ್ರೆಯ ಬೃಹತ್ ಸಮಾವೇಶ ಭಾಗಿಯಾಗಲಿದ್ದಾರೆ.

ಮೋದಿ ಆಗಮನದ ಹಿನ್ನೆಲೆ, ಬೆಂಗಳೂರಿನ ಮೇಖ್ರಿ ಸರ್ಕಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಅರವಿಂದ ಲಿಂಬಾವಳಿ, ಎಸ್. ಸುರೇಶ್‌ಕುಮಾರ್, ಡಾ. ಸಿ.ಎನ್.ಅಶ್ವತ್ಥನಾರಾಯಣ್, ರವಿಸುಬ್ರಮಣ್ಯ, ಉದಯ್ ಗರುಡಾಚಾರ್ ಸೇರಿದಂತೆ ಲೋಕಸಭಾ ಅಭ್ಯರ್ಥಿಗಳಾದ ಡಿ.ವಿ. ಸದಾನಂದಗೌಡ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv