‘ಯುವ ಮತದಾರರೆ ನಿಮ್ಮ ಮೊದಲ ಮತವನ್ನು ಯೋಧರಿಗಾಗಿ ಹಾಕಿ, ಬಲಿಷ್ಠ ಭಾರತಕ್ಕಾಗಿ ಹಾಕಿ’

ಚಿತ್ರದುರ್ಗ: ಪ್ರದಾನಿ ನರೇಂದ್ರ ಮೋದಿ ಇಂದು ಕೋಟೆ ನಾಡು ಚಿತ್ರದುರ್ಗದಲ್ಲಿ ಬೃಹತ್​​ ಪ್ರಚಾರ ನಡೆಸಿದ್ರು. ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಶರಣರ ಮಣ್ಣಿಗೆ ಆಗಮಿಸಿದ್ದಕ್ಕೆ ಸಂತೋಷಗೊಂಡಿರುವುದಾಗಿ ಹೇಳಿದ್ರು. ಅಲ್ಲದೇ, ಚಿತ್ರದುರ್ಗದ ಅತ್ಯಂತ ಮಹತ್ವಾಕಾಂಕ್ಷಿ ಅಪ್ಪರ್​ ಭದ್ರಾ ಯೋಜನೆ ಕುರಿತು ಮಾತನಾಡಿದ್ರು. ಕಾಂಗ್ರೆಸ್​ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದ್ರೆ ನಮ್ಮ ಸರ್ಕಾರ ಈ ಯೋಜನೆಯನ್ನು ಮುನ್ನೆಲೆಗೆ ತರುತ್ತೆ. ನಿಗದಿತ ವೇಳೆಯಲ್ಲಿ ಯೋಜನೆ ಪೂರ್ಣಗೊಳಿಸುವ ಆಶ್ವಾಸನೆ ನೀಡಿದ್ರು.

ಇದೇ ವೇಳೆ, ಮೊದಲ ಬಾರಿಗೆ ಮತ ಚಲಾಯಿಸುತ್ತರುವ ಮತದಾರರಿಗೆ ಮೋದಿ ಕಿವಿ ಮಾತು ಹೇಳಿದ್ರು. ಮೊದಲಬಾರಿಗೆ ಮತ ಚಲಾಯಿಸುತ್ತಿರುವ ಎಲ್ಲರಿಗೂ ಅಭಿನಂದನೆ. ನೀವು ಕೇವಲ ಸಂಸದರನ್ನು ಆಯ್ಕೆ ಮಾಡ ಬೇಡಿ. ಕೇವಲ ಪ್ರಧಾನಿಯನ್ನು ಆಯ್ಕೆ ಮಾಡಬೇಡಿ. ಬಲಶಾಲಿ ಭಾರತಕ್ಕಾಗಿ, ಬಲಶಾಲಿ ಸರ್ಕಾರವನ್ನು ಆಯ್ಕೆ ಮಾಡಿ. ಮೊದಲ ಬಾರಿಗೆ ಇವಿಎಂ ಮಷಿನ್ ಬಳಿ ಹೋದಾಗ, ತುಂಬಾ ಯೋಚಿಸಿ ಮತ ಹಾಕಿ. ​ನಿಮ್ಮ ಪ್ರತೀ ವೋಟ್​ ಮುಖ್ಯ ಅಂತಾ ಹೇಳಿದ್ರು. ನಿಮ್ಮ ಮೊದಲ ಮತ ಹಾಕುವಾಗ, ಅದು ಗಡಿಯಲ್ಲಿ ನಮ್ಮನ್ನು ಕಾಯುವ ಯೋಧರಿಗಾಗಿ ಅನ್ನೋದು ನೆನಪಿಸಿಕೊಳ್ಳಿ, ಆಯುಷ್ಯಮಾನ್ ಭಾರತಕ್ಕಾಗಿ ಪ್ರತಿ ಬಡ ಕುಟುಂಬದ ಆರೋಗ್ಯಕ್ಕಾಗಿ ಅನ್ನೋದು ನೆನಪಿಸಿಕೊಳ್ಳಿ, ಪ್ರತಿ ಬಡ ಕುಟುಂಬದ ಮೇಲೆ ಸೂರು ತರಲು ಈ ಮತ ಅಂತಾ ಮತ ಹಾಕಿ. ನಿಮ್ಮ ಸ್ನೇಹಿತರಿಗೆ ಅಥವಾ ನಿಮಗೆ ಮುದ್ರಾ ಯೋಜನೆಯಡಿಯಲ್ಲಿ ಏನೂ ಅಡ ಇಡದೇ ಸಿಗುವ ಸಹಾಯಕ್ಕಾಗಿ ಅನ್ನೋದನ್ನು ನೆನಪಿಸಿಕೊಂಡು ಮತ ಹಾಕಿ ಅಂತಾ ಕರೆ ನೀಡಿದ್ರು.

ಪೂರ್ಣ ಬಹುಮತದ ಸರ್ಕಾರ ಹಾಗೂ ಕಾಂಗ್ರೆಸ್​ ಮುಕ್ತ ಸರ್ಕಾರ ಹೇಗೆ ಕೆಲಸ ಮಾಡುತ್ತೆ ಅಂತಾ 5 ವರ್ಷದಲ್ಲಿ ನೋಡಿದ್ದೀರಿ. ಹಾಗಾಗಿ ಪ್ರತಿ ಬೂತ್​ನಲ್ಲಿ ಕಮಲ ಅರಳಬೇಕು. ಕಮಲ ಚಿಹ್ನೆಗೆ ಬೀಳುವ ಒಂದು ವೋಟ್​ ಕೂಡಾ ಮೋದಿ ಅಕೌಂಟ್​ಗೆ ಬೀಳುತ್ತೆ. ಅದು ಇನ್ನು ಹೆಚ್ಚಿನ ಕೆಲಸ ಮಾಡಲು ನನಗೆ ಶಕ್ತಿ ತುಂಬುತ್ತೆ ಅಂತಾ ಪ್ರಧಾನಿ ಮೋದಿ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv