‘ಅಪರಾಧ ರಾಜಕಾರಣ ನಿಲ್ಲಿಸದಿದ್ರೆ ಯುವಕರ ಭವಿಷ್ಯ ಕತ್ತಲಿಲ್ಲಿ ಬೀಳಲಿದೆ’

ಉಡುಪಿ: ‘ಅಪರಾಧ ರಾಜಕಾರಣ ನಿಲ್ಲಿಸದಿದ್ರೆ ಯುವಕರ ಭವಿಷ್ಯ ಕತ್ತಲಿಲ್ಲಿ ಬೀಳಲಿದೆ. ಇದಕ್ಕೆಲ್ಲಾ ಕಾರಣ ರಾಜ್ಯದಲ್ಲಿ ಆಡಳಿತ ನಡೆಸ್ತಿರೋ ಕಾಂಗ್ರೆಸ್​’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್​ನ ದುಡ್ಡು ದೇಶದ ಯುವಕರ ಕಾರ್ಯಕ್ಕೆ ಬರಬೇಕು. ಆದರೆ ಈ ಹಿಂದಿನ ಸರ್ಕಾರ ಬ್ಯಾಂಕ್ ಲೂಟಿ ಮಾಡಲು ಬಿಡುತ್ತಿತ್ತು. ದುಡ್ಡಿನ ಮೂಲಕ ಹೊಸ ಉದ್ಯೋಗ ಮಾಡುವ ಯುವಕರಿಗೆ ಬ್ಯಾಂಕ್​ಗಳು ಬೀಗ ಜಡಿದಿದ್ದವು. ದುಡ್ಡು ಬೇಕಾಗಿದ್ದರೇ ಗಿರವಿ ಇಡಲು ಏನಾದ್ರು ಇದ್ಯಾ ಎಂದು ಬ್ಯಾಂಕಿನವ್ರು ಕೇಳುತ್ತಿದ್ದವು’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಪ್ರಧಾನ್ಯತೆ ಇದೆಯೇ..?

‘ನಾವು ಬ್ಯಾಂಕಿಂಗ್ ಕ್ಷೇತ್ರವನ್ನು ಯುವಕರ ಜೊತೆ ಸಂಪರ್ಕ ಕಲ್ಪಿಸಿದೆವು. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಶುರು ಮಾಡಲಾಗಿದೆ. 12 ಕೋಟಿ ಜನ ಅದರ ಉಪಯೋಗ ಪಡೆದುಕೊಂಡರು. ಕರ್ನಾಟಕದಲ್ಲಿ ₹120 ಕೋಟಿ ಲೋನ್​ ನೀಡಲಾಗಿದೆ. ಅವರು ತಮ್ಮ ಕಾಲಿನ ಮೇಲೆ ತಾವು ನಿಂತಿದ್ದಾರೆ. ನಾನು ಕರ್ನಾಟಕ ಸರ್ಕಾರವನ್ನು ಕಾಂಗ್ರೆಸ್​ ನಾಯಕರನ್ನ ಪ್ರಶ್ನಿಸಲು ಇಚ್ಛಿಸುತ್ತೇನೆ. ಲೋಕತಂತ್ರದಲ್ಲಿ ಹಿಂಸೆಗೆ ಪ್ರಾಧಾನ್ಯತೆ ಇದೆಯೇ ಎಂದು’.

‘ಹೀಗಾಗಿ ಈ ಚುನಾವಣೆಯಲ್ಲಿ ಕರ್ನಾಟಕದ ಜನ ಇದಕ್ಕೆ ನ್ಯಾಯ ಕೇಳಬೇಕು. ಎರಡು ವರ್ಷಗಳಲ್ಲಿ ಎರಡು ಡಜನ್ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂಸೆಯ ಮಾರ್ಗದಿಂದ ರಾಜಕಾರಣ ಮಾಡುವ ಕಾಂಗ್ರೆಸ್ ಮನೆಗೆ ಹೋಗಬೇಕು. ದೇಶದಲ್ಲಿ ಈಸ್  ಆಫ್ ಡುಯಿಂಗ್​ ಬಿಸಿನೆಸ್ ವಾತಾವರಣವಿದೆ. ಆದ್ರೆ, ಆದ್ರೆ ಇಲ್ಲಿನ ಸರ್ಕಾರ ಇಸ್​ ಆಫ್​ ಮರ್ಡರ್​ ಮಾಡುತ್ತಿದೆ. ಅಪರಾಧಿ ರಾಜಕಾರಣ ಮಾಡುತ್ತಿದೆ. ಇದನ್ನು ಕೊನೆಗೊಳಿಸದಿದ್ದರೆ ಕರ್ನಾಟಕದ ಯುವಕರ ಭವಿಷ್ಯ ಕತ್ತಲಿಲ್ಲಿ ಬೀಳಲಿದೆ. ಈ ಆತಂಕದಿಂದ ದೂರ ಬರಲು ನೀವೆಲ್ಲ ಮೇ 12 ರಂದು ಕಮಲದ ಬಟನ್​ ಒತ್ತಿ’ ಎಂದು ಮನವಿ ಮಾಡಿದರು.

ಅಸಹಿಷ್ಣುತೆ, ಹಿಂಸೆ ಕಾಂಗ್ರೆಸ್​ನ ಗುರುತು
ಕಾಂಗ್ರೆಸ್​ ಪಕ್ಷ ಅಸಹಿಷ್ಣುತೆ, ಹಿಂಸೆ,  ಕಾನೂನು ವ್ಯವಸ್ಥೆಯಲ್ಲಿ ಒಡಕೇ ಇದರ ಗುರುತು. ಕರ್ನಾಟಕದಲ್ಲಿ ಲೋಕಾಯುಕ್ತ ದುರ್ಬಲಗೊಂಡಿದೆ. ಇದಕ್ಕಿಂತ ಸಾಕ್ಷಿ ಏನು ಬೇಕು. ‘ಮರಳು ದಂಧೆಯಲ್ಲಿ ಮೇಲೆ ಕುಳಿತಿರುವ ಅಧಿಕಾರಿಗಳ ಆಶೀರ್ವಾದ ಇಲ್ಲದೇ ಇಲ್ಲವೇ. ಕರ್ನಾಟಕದಲ್ಲಿ ಇಂತಹ ಲೂಟಿಕೋರರು ನಿರ್ನಾಮಗೊಳ್ಳಬೇಕು ಅಲ್ಲವೇ? ಹೀಗಾಗಿ, ಮಾಫಿಯಾವನ್ನು ಪೋಷಿಸುವ ಸರ್ಕಾರದಿಂದ ಕರ್ನಾಟಕಕ್ಕೆ ಮುಕ್ತಿ ನೀಡಬೇಕು’ ಎಂದು ಆಗ್ರಹಿಸಿದರು.

ಉಡುಪಿ ಯುವಕರಿಗೆ ಧನ್ಯವಾದ
‘ಉಡುಪಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಉಡುಪಿ ಪರೀಕ್ಷೆಯಲ್ಲಿ ಗಡಬಡ ಆಗಿದೆ ಎಂದು ಕೇಳಲು ಸಾಧ್ಯವಿಲ್ಲ. ಇಂತಹ ಯುವಕರಿಂದ ದೇಶದ ಬಗ್ಗೆ ಹೆಮ್ಮೆ ಆಗುತ್ತದೆ. ಉಡುಪಿಯ ಯುವಕರಿಗೆ ಧನ್ಯವಾದ’ ಎಂದರು.

‘ಆದ್ರೆ 18-20 ವರ್ಷದ ನಂತರ ಉದ್ಯೋಗ ಅರಸಿ ಬೆಂಗಳೂರರಿಗೆ ಹೋಗಬೇಕಾಗುತ್ತದೆ. ಇಲ್ಲಿಯೇ ಅಭಿವೃದ್ಧಿ ಮಾಡಿ ಇಲ್ಲಿಯೇ ಉದ್ಯೋಗ ನೀಡಲು ಸಾಧ್ಯವಿಲ್ಲವೇ? ಇಲ್ಲಿನ ಸರ್ಕಾರಕ್ಕೆ ಈ ಬಗ್ಗೆ ಯೋಚನೆ ಮಾಡುವ ಆಲೋಚನೆ ಇಲ್ಲ. ಐದು ವರ್ಷದಲ್ಲಿ ಕಡೂರು, ಚಿಕ್ಕಮಂಗಳೂರು, ಸಕಲೇಶ್ವರಪುರದ ರೇಲ್ವೆ ಲೈನ ಯೋಜನೆಯನ್ನು 20 ವರ್ಷದಲ್ಲಿ 90 ಕಿ.ಮಿ. ರೈಲ್ವೆ ಲೈನ್​ ಮಾಡಲಾಗಲಿಲ್ಲ’ ಎಂದು ರಾಜ್ಯಸರ್ಕಾರವನ್ನು ಟೀಕಿಸಿದರು.

‘ಉಡುಪಿಯಲ್ಲಿ ರೈಲ್ವೆ ಕೆಲಸಗಳು ವೇಗದಿಂದ ಸಾಗುತ್ತಿವೆ. ವಿಕಾಸ ಒಂದೇ ಯೋಜನೆ ಮಾಡಿಕೊಂಡು ಮೀನುಗಾರರ ಜೀವನ ಬದಲಾಯಿಸಲು ಸಂಕಲ್ಪ ಮಾಡಿದ್ದೇವೆ. ಇನ್ನು 12 ದಿನ ಮಾತ್ರ ಬಾಕಿ ಇದೆ. ಎಲ್ಲರ ಮತದಾರರ ಭವಿಷ್ಯವನ್ನು ಭಾರತದ ಬದಲಾವಣೆಯನ್ನು ಮಾಡುವ ಸಂಕಲ್ಪ ಮಾಡಿ. ದಿಲ್ಲಿ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ನಡೆಯವ ಕಾಲ ಬರಲಿದೆ’ ಅಂತ ಮೋದಿ ಭವಿಷ್ಯ ನುಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv