ಪ್ರಧಾನಿ ವಿರುದ್ಧ ಯೋಗೇಂದ್ರ ಯಾದವ್​ ಫುಲ್‌ ಗರಂ..!

ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಹಾಗೂ ಮದ್ಯ ಬೆಂಬಲವನ್ನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಹೋರಾಟದ ಪರಿಣಾಮವಾಗಿ ನರೇಂದ್ರ ಮೋದಿ ನಮ್ಮ ಕುಟುಂಬದ ಮೇಲೆ ದ್ವೇಷ ಕಾರುತ್ತಿದ್ದಾರೆ ಅಂತ ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೆಂದ್ರ ಯಾದವ್ ಆರೋಪಿಸಿದ್ದಾರೆ. ಸರಣಿ ಟ್ವೀಟ್​ ಮಾಡುವ ಮೂಲಕ ಪ್ರಧಾನಿ ವಿರುದ್ಧ ಕೆಂಡ ಕಾರಿರುವ ಯೋಗೇಂದ್ರ ಯಾದವ್‌, ಹರಿಯಾಣದ ರೇವರಿಯಲ್ಲಿರುವ ನನ್ನ ಸೋದರಿ ಆಸ್ಪತ್ರೆಯ ಮೇಲೆ ಐಟಿ ರೇಡ್ ಆಗಿದೆ ನಾನು ರೇವರಿ ಎಂಬಲ್ಲಿ ಕನಿಷ್ಠ ಬೆಂಬಲ ಬೆಲೆ ಹಾಗೂ ಮದ್ಯ ಮಾರಾಟಕ್ಕೆ ನೀಡುತ್ತಿರುವ ಬೆಂಬಲ ವಿರೋಧಿಸಿ 9 ದಿನ ಪಾದಯಾತ್ರೆ ಮಾಡಿದ್ದೆ. ಇದರ ಬೆನ್ನಲ್ಲೇ ಈಗ ನನ್ನ ಸೋದರಿಯ ಆಸ್ಪತ್ರೆಯ ಮೇಲೆ ಐಟಿ ರೇಡ್ ಮಾಡಲಾಗಿದೆ. 100ಕ್ಕೂ ಹೆಚ್ಚು ಜನ ಅಧಿಕಾರಿಗಳು 11 ಗಂಟೆಗೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ನನ್ನ ಸೋದರಿ, ಮಾವ, ಸೋದರ ಸಂಬಂಧಿ ಸೇರಿ ಎಲ್ಲ ವೈದ್ಯರನ್ನು ಅವರ ಚೇಂಬರ್​ನಲ್ಲಿ ಬಂಧಿಸಿ ಇಡಲಾಗಿತ್ತು. ಹಾಸ್ಪಿಟಲ್​​ ಸೀಲ್ ಮಾಡಿ. ಐಸಿಯುನಲ್ಲಿರುವ ನವಜಾತ ಶಿಶುವನ್ನು ಬೆದರಿಸುವ ಪರಿಯಲ್ಲಿ ರೇಡ್ ನಡೆಸಲಾಗಿದೆ. ಇಂತಹ ಕೃತ್ಯಗಳ ಮೂಲಕ ಮೋದಿಜಿ ನನ್ನನ್ನ ತಡೆಯಲಾರರು ಅಂತ ಟ್ವೀಟ್ ಮಾಡಿದ್ದಾರೆ. ಇಲ್ಲಿಯವರೆಗೂ ನಾನು ನನ್ನ ಸೋದರಿಯನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ . ಆಸ್ಪತ್ರೆಯೊಳಗೆ ಯಾರ ಪ್ರವೇಶಕ್ಕೂ ಅನುಮತಿ ನೀಡಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ