ಮಂಗಳೂರಿಗೆ ಮೋದಿ ಆಗಮನ; ನಗರದಾದ್ಯಂತ ವೈನ್ ಶಾಪ್, ಬಾರ್​ಗಳು ಬಂದ್

ಮಂಗಳೂರು: ಇಂದು ಸಂಜೆ‌ 4 ಗಂಟೆಗೆ ಮಂಗಳೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. 1500 ಪೊಲೀಸರು, 5 ಕೆಎಸ್​​ಆರ್​ಪಿ, 8 ಸಿಆರ್​ಪಿಎಫ್​ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಉಸ್ತುವಾರಿಗಾಗಿ ಕಾರವಾರ, ಚಿಕ್ಕಮಗಳೂರು ಎಎಸ್​ಪಿಗಳನ್ನ ನೇಮಕ ಮಾಡಲಾಗಿದೆ. ಭದ್ರತೆಗಾಗಿ ಕೆಎಸ್ಆರ್​ಪಿ 7ನೇ ಪಡೆ ಕಮಾಂಡೆಂಟ್ ಆಗಮಿಸಿದ್ದಾರೆ.  ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಱಲಿಗೆ ಆಗಮಿಸುವ ವಾಹನಗಳಿಗೆ ನಗರದ ವಿವಿಧೆಡೆ ಪಾರ್ಕಿಂಗ್ ಸೌಲಭ್ಯ ಏರ್ಪಡಿಸಲಾಗಿದೆ. ಪ್ರಚಾರ ಸಭೆಗೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ. ಇನ್ನು ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದ ಎಲ್ಲಾ ವೈನ್ ಶಾಪ್ ಹಾಗೂ ಬಾರ್​ಗಳನ್ನು ಬಂದ್ ಮಾಡಲು ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv