ಪ್ರಧಾನಿಗೆ ಬಂದಿದ್ದ ನೆನಪಿನ ಕಾಣಿಕೆ 13 ಲಕ್ಷಕ್ಕೆ ಹರಾಜು..!

ಪ್ರಧಾನಮಂತ್ರಿ ನರೇಂದ್ರ ಮೋದಿಗೆ ದೇಶ ವಿದೇಶಗಳ ನಾಯಕರಿಂದ ಬಂದಿದ್ದ ಗಿಫ್ಟ್, ನೆನಪಿನ ಕಾಣಿಕೆಗಳನ್ನ ಹರಾಜಿಗೆ ಇಡಲಾಗಿತ್ತು. ಇದೀಗ ಹರಾಜು ಪೂರ್ಣಗೊಂಡಿದ್ದು, ಒಟ್ಟು 1,800 ನೆನಪಿನ ಕಾಣಿಕೆಳಗು ಹರಾಜಾಗಿವೆ.
ಈಗಾಗಲೇ ಜನವರಿಯಲ್ಲಿ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆದಿತ್ತು. ಇದಾದ ಬಳಿಕ ಶನಿವಾರದಂದು ಆನ್​ಲೈನ್​ನಲ್ಲಿ ಇ-ಆಕ್ಷನ್ ನಡೆಸಲಾಗಿತ್ತು. ಇದೀಗ ಹರಾಜು ಪ್ರಕ್ರಿಯೆ ಸಂಪೂರ್ಣಗೊಂಡಿದೆ. ಹರಾಜಿನಲ್ಲಿ ಮಾರಾಟವಾದ ನೆನಪಿನ ಕಾಣಿಕೆಗಳ ಪೈಕಿ ಅತೀ ಹೆಚ್ಚು ಮೌಲ್ಯಕ್ಕೆ ಹರಾಜಾಗಿದ್ದು, ಮೋದಿಗೆ ಗಿಫ್ಟ್ ಆಗಿ ಬಂದಿದ್ದ ಕಟ್ಟಿಗೆಯ ಅಶೋಕ ಸ್ಥಂಬ. ಬರೊಬ್ಬರಿ 13 ಲಕ್ಷ ರೂಪಾಯಿಗೆ ಅಶೋಕ ಸ್ಥಂಬ ಸೋಲ್ಡೌಟ್ ಆಗಿದೆ.
ಅಶೋಕ ಸ್ಥಂಬದ ಮೂಲ ಬೆಲೆ 4 ಸಾವಿರ ರೂಪಾಯಿಯಾಗಿತ್ತು, ಆದ್ರೆ, ಬಿಡ್ಡಿಂಗ್​ನಲ್ಲಿ 13 ಲಕ್ಷದವರೆಗೂ ತಲುಪಿ, ಕಡೆಗೆ 13 ಲಕ್ಷಕ್ಕೆ ಬಿಕರಿಯಾಗಿದೆ. ಇನ್ನು, 5 ಸಾವಿರ ರೂಪಾಯಿ ಮೂಲ ಬೆಲೆ ಹೊಂದಿದ್ದ ಶಿವನ ವಿಗ್ರಹ ಬರೊಬ್ಬರಿ 10 ಲಕ್ಷಕ್ಕೆ ಹರಾಜಾಗಿದೆ. ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸಭಾಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಟ್ಟಿಗೆಯಿಂದ ತಯಾರಿಸಲಾಗಿದ್ದ ಬೈಕ್ 5 ಲಕ್ಷ ರೂಪಾಯಿಗೆ ಹರಾಜಾಗಿದೆ. ಅಸ್ಸಾಂನ ಮಜೌಲಿಯಲ್ಲಿ ನೆನಪಿನ ಕಾಣಿಕೆಯಾಗಿ ಪಡೆದಿದ್ದ ಸಾಂಪ್ರದಾಯಿಕ ಹೊರಾಯಿ 12 ಲಕ್ಷಕ್ಕೆ ಸೋಲ್ಡೌಟ್ ಆಗಿದೆ.
ಪ್ರಧಾನಿಗೆ ಸಿಕ್ಕ ನೆನಪಿನ ಕಾಣಿಕೆಗಳ ಹರಾಜಿನಿಂದ ಬಂದ ಹಣವನ್ನ ಗಂಗಾ ನದಿ ಶುದ್ಧೀಕರಣ ಹಾಗು ಸಂರಕ್ಷಣೆಗೆ ಆರಂಭಿಸಿರುವ ನಮಾಮಿ ಗಂಗೆ ಯೋಜನೆಗೆ ಬಳಸಲಾಗುತ್ತದೆ ಅಂತ ಪ್ರಧಾನಿ ಕಾರ್ಯಾಲಯ ತಿಳಿಸಿದೆ. ನಮಾಮಿ ಗಂಗೆ ಯೋಜನೆಗೆ ಫಂಡ್ ರೈಸ್ ಮಾಡುವ ಉದ್ದೇಶದಿಂದಲೇ ಹರಾಜು ಪ್ರಕ್ರಿಯೆಯನ್ನ ನಡೆಸಲಾಗಿತ್ತು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv