ವಿಶ್ವೇಶ್ವರಯ್ಯ ಹೆಸರನ್ನು 5 ನಿಮಿಷ ಸ್ಪಷ್ಟವಾಗಿ ಜಪಿಸಿ ಸಾಕು- ರಾಹುಲ್​ಗೆ ಸವಾಲು!

ಸಂತೆಮರಹಳ್ಳಿ: ಇಂದಿನ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲಿ ಹರಿಹಾಯ್ದ ಮೋದಿ,  ಕಾಂಗ್ರೆಸ್ ಅಧ್ಯಕ್ಷರಿಗೆ ದೇಶದ ಸಂಸ್ಕೃತಿ ಬಗ್ಗೆ ಕನಿಷ್ಠ ಗೌರವವೂ ಇಲ್ಲ. ವಂದೇ ಮಾತರಂಗೆ ಅಗೌರವ ತೋರಿಸುವ ಇವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ರು. ಅಲ್ಲದೇ,
ಲೋಕತಂತ್ರದಲ್ಲಿ ಪ್ರತಿಯೊಬ್ಬರ ಮಾತು ಮುಖ್ಯವಾಗುತ್ತದೆ. 15 ನಿಮಿಷ ಲೋಕಸಭೆಯಲ್ಲಿ ಮಾತನಾಡಿದರೆ ಮೋದಿ ಅವರು ಲೋಕಸಭೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ ಹೊರಹೋಗಬೇಕಾದೀತು ಎಂದು ಕಾಂಗ್ರೆಸ್ ಅಧ್ಯಕ್ಷರು ನನಗೆ ಸವಾಲು ಎಸೆದಿದ್ದರು. ಸದ್ಯ ಕಾಂಗ್ರೆಸ್​ ಅಧ್ಯಕ್ಷರು 15 ನಿಮಿಷ ಮಾತನಾಡುತ್ತೇನೆ ಅನ್ನುತ್ತಾರಲ್ಲ. ಅದೇ ಗ್ರೇಟ್​. ನಾನು ಕಾಮ್​ ದಾರ್​ (ಕೆಲಸಗಾರ). ನೀವು ನಾಮ್​ದಾರ್​ (ಹೆಸರಿಗಷ್ಟೇ ಇರುವವರು). ನಾವು, ನೀವು ಒಟ್ಟಿಗೇ ಕುಳಿತುಕೊಳ್ಳುವ  ಮಾತೆಲ್ಲಿಂದ ಬರುತ್ತದೆ!? ನೀವು ಮೇಲಿನವರು. ನಾವು ಕಾರ್ಮಿಕರು… ಕಾರ್ಮಿಕವರ್ಗಕ್ಕೆ ನಿಮ್ಮಂಥ ನಾಮ್​ದಾರ್​ ಜೊತೆ ಕೆಲಸವೇನು? ಎಂದು ಮೋದಿ ಕುಟುಕಿದ್ರು. ಅಲ್ಲದೇ, ನನ್ನ ಜೊತೆ ಬಿಡಿ ರಾಜ್ಯದಲ್ಲಿ ಈಗ ನಡೆಯುತ್ತಿರುವ ಚುನಾವಣೆಯ ವೇಳೆ ನೀವು ಕರ್ನಾಟಕದ ಜನತೆಯೊಂದಿಗೆ 15 ನಿಮಿಷ ಮಾತನಾಡಿ ಸಾಕು. ಅದು ಹಿಂದಿಯೋ, ಇಂಗ್ಲಿಷೋ ಅಥವಾ ನಿಮ್ಮ ‘ಮಾತೃಭಾಷೆಯೋ’ ಯಾವುದೋ ಒಂದು ಭಾಷೆಯಲ್ಲಿ 15 ನಿಮಿಷ ನಿಮ್ಮ ಕಾಂಗ್ರೆಸ್​ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿಬಿಡಿ ಸಾಕು ಎಂದು ವ್ಯಂಗ್ಯದ ಬಾಣ ಬಿಟ್ರು. ಅಲ್ಲದೇ, ಇದು ಸಾಧ್ಯವಾಗುತ್ತದೋ ನಿಮಗೆ? ಒಂದು ಕೆಲಸ ಮಾಡಿ ಕಾಂಗ್ರೆಸ್​ ಅಧ್ಯಕ್ಷರೇ ಆ 15 ನಿಮಿಷಗಳಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು 5 ನಿಮಿಷ ಕಾಲ ಸುಸ್ಪಷ್ಟವಾಗಿ ಜಪಿಸಿ ಸಾಕು ಅಂತಾ ಸವಾಲು ಎಸೆದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv