ರಜೆ ಕೇಳಿದರೆ ಕೊಡಲಿಲ್ಲ, ಮೋದಿಗಾಗಿ ಆಸ್ಟ್ರೇಲಿಯಾ ಕೆಲಸವನ್ನೇ ಬಿಟ್ಟು ಬಂದ ಅಭಿಮಾನಿ

ಮಂಗಳೂರು: ಮಂಗಳೂರಿನ ಯುವಕನೊಬ್ಬ ಪ್ರಧಾನಿ ಮೋದಿಗಾಗಿ ಆಸ್ಟ್ರೇಲಿಯಾದಲ್ಲಿ ನಿರ್ವಹಿಸುತ್ತಿದ್ದ ಹುದ್ದೆಯನ್ನೇ ತೊರೆದು ಬಂದಿದ್ದಾರೆ. ಸುರತ್ಕಲ್ ನಿವಾಸಿ ಆಗಿರುವ ಸುಧೀಂದ್ರ ಹೆಬ್ಬಾರ್, ಸಿಡ್ನಿ ಏರ್​​ಪೋರ್ಟ್​​ ಕಚೇರಿಯಲ್ಲಿ ಸ್ಕ್ರೀನಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ‘ಪ್ರಧಾನಿ ಮೋದಿಯಿಂದಾಗಿ ಭಾರತೀಯರ ಬಗ್ಗೆ ಆಸ್ಟ್ರೇಲಿಯಾದಲ್ಲಿ ಗೌರವ ಹೆಚ್ಚಿದೆ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಮ್ಮ ಹಕ್ಕನ್ನ ಚಲಾಯಿಸಬೇಕು’ ಎಂದು ನಿರ್ಧರಿಸಿ ಊರಿಗೆ ಹೋಗಲು ರಜೆ ಕೇಳಿದ್ದಾರೆ. ಆದರೆ, ಮತದಾನ ದಿವಸ ಊರಿಗೆ ಬರಲು ರಜೆ ಸಿಕ್ಕಿರಲಿಲ್ಲ. ಹೇಗಾದರೂ ಮಾಡಿ ವೋಟ್​ ಹಾಕಲೇ ಬೇಕು ಅಂತಾ ತೀರ್ಮಾನಿಸಿದ ಸುಧೀಂದ್ರ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮಂಗಳೂರಿಗೆ ಬಂದಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv