ಕ್ಯಾಂಪೇನ್​ ಕಿಚ್ಚಿಗೆ ಮೋದಿ ಫ್ಯಾನ್​ ಬಲಿ..!

ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಪರ ಪ್ರಚಾರ ಮಾಡುತ್ತಿದ್ದ ವಯೋವೃದ್ಧರೊಬ್ಬರು ದುರುಳನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದೆ ತಮಿಳುನಾಡಿನಲ್ಲಿ 75 ವರ್ಷದ ಗೋವಿಂದ್​ ರಾಜನ್​ , ಪ್ರಧಾನಿ ಮೋದಿ ಪರ ಪ್ರಚಾರ ಮಾಡುತ್ತಿದ್ದರು. ಇವರು ಪ್ರಧಾನಿ ಮೋದಿಯ ಕಟ್ಟಾ ಅಭಿಮಾನಿ ಮಾತ್ರವಲ್ಲದೇ, ಮಾಜಿ ಸಿಎಂ ದಿವಂಗತ ಜಯಯಲಿತಾರ ಬೆಂಬಲಿಗ ಕೂಡ. ಗೋವಿಂದ್​ ರಾಜನ್​ ಪ್ರಧಾನಿ ಮೋದಿ ಮತ್ತು ಜಯಲಲಿತಾ ಭಾವಚಿತ್ರವಿರೋ ಟೀ ಶರ್ಟ್​ ಧರಿಸಿ, ಹಲವು ಪ್ರದೇಶಗಳಲ್ಲಿ ಬಿಜೆಪಿ-ಎಐಎಡಿಎಂಕೆ ಪರ ಕ್ಯಾಂಪೇನ್​ ಮಾಡುತ್ತಿದ್ದರು. ಈ ವೇಳೆ ಡಿಎಂಕೆ ಮತ್ತು ಕಾಂಗ್ರೆಸ್​ ಬೆಂಬಲಿಗನೊಬ್ಬ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ತೀವ್ರವಾಗಿ ಗಾಯಗೊಂಡ ಗೋವಿಂದ್​ ರಾಜನ್​, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಗೋಪಿನಾಥ್​ ಎಂಬಾತನನ್ನು ಬಂಧಿಸಿದ್ದಾರೆ. ಗೋಪಿನಾಥ್​ ಮೃತ ಗೋವಿಂದ್​ ರಾಜನ್​ ಜೊತೆ ವಾದ ಮಾಡುತ್ತಿದ್ದ ಎಂಬ ಮಾಹಿತಿ ಆಧರಿಸಿ ಬಂಧಿಸಲಾಗಿದೆ. ಈತ ಡಿಎಂಕೆ-ಕಾಂಗ್ರೆಸ್​ ಮೈತ್ರಿಯ ಬೆಂಬಲಿಗ ಎಂದು ಪೊಲೀಸರು ತಿಳಿಸಿದ್ದಾರೆ. ಗೋಪಿನಾಥ್​ ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್​ ಅಭಿಮಾನಿಯಾಗಿದ್ದು, ಬಿಜೆಪಿ ಮೈತ್ರಿ ವಿರೋಧಿಸಿ ಹೀಗೆ ಮಾಡಿರಬಹುದೆಂದು ಹೇಳಲಾಗುತ್ತಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv