ರಾಹುಲ್ ಗಾಂಧಿಗೆ ಮೋದಿ ಹೆದರಲ್ಲ, ಖರ್ಗೆ ಈ ದೇಶದ ಪ್ರಧಾನಿಯಾಗಬೇಕು..!

ದಾವಣಗೆರೆ: ರಾಹುಲ್ ಗಾಂಧಿಗೆ ಮೋದಿ ಹೆದರಲ್ಲ, ಅವರನ್ನು ಎದುರಿಸುವ ಶಕ್ತಿ ಮಲ್ಲಿಕಾರ್ಜುನ ಖರ್ಗೆ ಒಬ್ಬರಿಗೆ ಮಾತ್ರ ಇರೋದು. ಖರ್ಗೆ ಈ ದೇಶದ ಪ್ರಧಾನಿ ಆಗಬೇಕು ಎಂದು ದಾವಣಗೆರೆ ಛಲವಾದಿ ಮಹಾಸಭಾ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ‌. ಪ್ರಧಾನಿ ಮೋದಿಯವರನ್ನು ಎದುರಿಸುವ ತಾಕತ್ತು ಮಲ್ಲಿಕಾರ್ಜುನ್ ಅವರಿಗಿದೆ‌. ರಾಹುಲ್ ಗಾಂಧಿಯವರಿಂದಲೂ ಮೋದಿ ಎದುರಿಸಲು ಸಾಧ್ಯವಿಲ್ಲ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮೊದಲ ದಲಿತ ಮುಖಂಡ ದಿ ಕೆ ಹೆಚ್ ರಂಗನಾಥ್ ದಿ. ಬಸವಲಿಂಗಪ್ಪ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು ಆಗಲಿಲ್ಲ, ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗುವುದು ಅಲ್ಲ ಈ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.


follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv