ಕೊಪ್ಪಳದಲ್ಲಿಂದು ಪ್ರಧಾನಿ ಮೋದಿ ಚುನಾವಣಾ ರಣಕಹಳೆ

ಕೊಪ್ಪಳ: ಏಪ್ರಿಲ್ 9ರಂದು ಚಿತ್ರದುರ್ಗ, ಮೈಸೂರಿನ ಱಲಿಯಲ್ಲಿ ಅಬ್ಬರದ ಪ್ರಚಾರ ಮಾಡಿ ಹೋಗಿದ್ದ ಮೋದಿ, ಇಂದು ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ನಡೆಯಲಿರುವ ಪ್ರಚಾರ ಱಲಿಯಲ್ಲಿ ಮೋದಿ ರಾಯಚೂರು, ಬಳ್ಳಾರಿ, ಗದಗ, ಕೊಪ್ಪಳ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ನಡೆಸಲಿದ್ದಾರೆ. ಏಪ್ರಿಲ್ 18ಕ್ಕೆ ನಡೆಯಬೇಕಿದ್ದ, ಪ್ರಚಾರ ಸಭೆ ಇಂದೇ ನಡೆಯಲಿದ್ದು. ಕನಕಗಿರಿ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ಸುಮಾರು 30 ಎಕರೆ ಸ್ಥಳದಲ್ಲಿ ಮದ್ಯಾಹ್ನ 3 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದೆ.ಱಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ಒಟ್ಟು 6 ಱಲಿಗಳನ್ನ ನಡೆಸಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv