ಸ್ವಲ್ಪ ಯಾಮಾರಿದ್ರೂ ಮೊಬೈಲ್ ಹೋಗತ್ತೆ, ಹುಷಾರ್..!

ಕೊಪ್ಪಳ: ಮೊಬೈಲ್ ಬಗ್ಗೆ ಸ್ವಲ್ಪ ಜಾಗರೂಕವಾಗಿರಿ. ಸ್ವಲ್ಪ ಯಾಮಾರಿದ್ರೂ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಖಂಡಿತ. ಸೈಲೆಂಟ್ ಆಗಿ ಜೇಬಿಗೆ ಕೈ ಹಾಕಿ ಮೊಬೈಲ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದಾಗಿರುವುದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದುರ್ಗಾ ಫ್ಯಾನ್ಸಿ ಸ್ಟೋರ್​ನಲ್ಲಿ. ಪ್ಲಾಸ್ಟಿಕ್ ಚೀಲ ಜೇಬಿಗೆ ಅಡ್ಡ ಹಿಡಿದು ಸ್ಯಾಮ್‌ಸಂಗ್‌ ಕಂಪನಿಯ ಸುಮಾರು 40ಸಾವಿರ ಬೆಲೆಯ ಮೊಬೈಲ್ ಕಳ್ಳತನ ಮಾಡಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv