ಉಪೇಂದ್ರ ನಟನೆಯ ಸಿನಿಮಾ ಶೂಟಿಂಗ್ ವೇಳೆ ನಟಿ ಕೈಯಲ್ಲಿದ್ದ ಮೊಬೈಲ್​ ಎಗರಿಸಿದ ಕಳ್ಳ..!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾ ಶೂಟಿಂಗ್ ವೇಳೆ ಕಳ್ಳನೊಬ್ಬ ಕೈಚಳಕ ತೋರಿದ್ದು, ದುಬಾರಿ ಐ ಫೊನ್ ಎಗರಿಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಪೇಂದ್ರ ಅಭಿನಯದ ಹೋಂ ಮಿನಿಸ್ಟರ್ ಚಿತ್ರದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಕಬ್ಬನ್ ಪಾರ್ಕ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ನಟಿ ಹಾಗೂ ಮಾಡೆಲ್ ಸುಷ್ಮಿತಾ ಅಂಚನ್ ಅವರ ಐ ಫೋನ್ ಎಕ್ಸ್ ಮೊಬೈಲ್ ​ಅನ್ನು ಕಳ್ಳ ಕಿತ್ತೊಯ್ದಿದ್ದಾನೆ. ಹೋಂ ಮಿನಿಸ್ಟರ್ ಚಿತ್ರದ ಲೀಡ್ ರೋಲ್ ನಲ್ಲಿರೋ ನಟಿ ಚಾಂದಿನಿ ಅಂಚನ್ ಅವರ ತಂಗಿಯೇ ಸುಷ್ಮಿತಾ ಅಂಚನ್.

ಮೊಬೈಲ್​ ಎಗರಿಸಿದ್ದು ಹೇಗೆ?
ಏಪ್ರಿಲ್​​ 22 ರಂದು ಚಾಂದಿನಿ ಅಂಚನ್ ನಟನೆಯ ಚಿತ್ರೀಕರಣ ಕಬ್ಬನ್ ಪಾರ್ಕ್ ನಲ್ಲಿ ನಡೆಯುತ್ತಿತ್ತು. ಅಕ್ಕನ ಪಾತ್ರದ ಚಿತ್ರೀಕರಣ ಭಾಗವನ್ನ ನೋಡಲು ಬಂದಿದ್ದಾಗ ಸುಷ್ಮಿತಾ ಅಂಚನ್ ಮೊಬೈಲ್​ ಕಳ್ಳತನವಾಗಿದೆ. ಚಿತ್ರೀಕರಣ ನೋಡ್ತಾ ಕಬ್ಬನ್ ಪಾರ್ಕ್ ನ ಸೆಂಟ್ರಲ್ ಲೈಬ್ರರಿ ಮುಂದೆ ಸುಷ್ಮಿತಾ ಅಂಚನ್ ನಿಂತಿದ್ದರು. ಈ ವೇಳೆ ಸುಷ್ಮಿತಾ ಕೈಯಲ್ಲಿದ್ದ ಮೊಬೈಲ್​ಅನ್ನು ಕಸಿದು, ಆರೋಪಿ ಪರಾರಿಯಾಗಿದ್ದಾನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸುಷ್ಮಿತಾ ಅಂಚನ್, ಲೂಸ್ ಮಾದ ಯೋಗೇಶ್ ಅಭಿನಯದ ಪುಂಡ ಚಿತ್ರದಲ್ಲಿ ಅಭಿನಯಿಸಿದ್ದರು. ಅವರು ಮಿಸ್ ಗ್ಲೋರಿ ಇಂಡಿಯಾ 2019 ಸ್ಪರ್ಧೆಯಲ್ಲಿ Miss Beauty full eyes ಪ್ರಶಸ್ತಿ ಪಡೆದಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv