ಗೌರಿ ಹಂತಕರೇ ಎಂ.ಎಂ ಕಲಬುರ್ಗಿ ಹತ್ಯೆಯ ರೂವಾರಿಗಳು!?

ಬೆಂಗಳೂರು: ಗೌರಿ ಲಂಕೇಶ್​ ಹತ್ಯೆಯಲ್ಲಿ ಭಾಗಿಯಾಗಿದ್ದ ಹಂತಕರೇ ವಿಚಾರವಾದಿ ಎಂ.ಎಂ ಕಲಬುರ್ಗಿ ಹತ್ಯೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಇನ್ನ ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ಗೌರಿ ಹತ್ಯೆ ಆರೋಪಿಗಳಾದ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ರಾಮಚಂದ್ರ ಬದ್ದಿ , ಅಮಿತ್ ದೇಗ್ವೇಕರ್, ಭರತ್ ಕುರ್ಣೆ, ಸುಧನ್ವ, ರಾಜೇಶ್ ಬಂಗೇರಾ, ಸುಜಿತ್, ಶರದ್ ಕಲಸ್ಕರ್ ಸೇರಿ ಹತ್ತು ಜನ ಎಂ.ಎಂ ಕಲಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಗಣೇಶ್ ಮಿಸ್ಕಿನ್ ಮತ್ತು ರಾಮಚಂದ್ರ ಬದ್ದಿ ಹತ್ಯೆ ಮಾಡಿದ್ದು, ಶರದ್ ಕಲಸ್ಕರ್ ಹತ್ಯೆಗೆ ಬಳಕೆಯಾಗಿದ್ದ ಬೈಕ್ಅನ್ನ ಇವರಿಗೆ ತಂದು ಕೊಟ್ಟಿದ್ದನಂತೆ. ಅಲ್ಲದೇ ಗೌರಿ ಮತ್ತು ಕಲಬುರ್ಗಿ ಹತ್ಯೆಗೆ ಬಳಕೆಯಾಗಿರುವುದು ಒಂದೇ ಪಿಸ್ತೂಲ್ ಎಂದೂ ಶಂಕಿಸಲಾಗಿದೆ. ಆದ್ರೆ ಆರೋಪಿಗಳು ಪಿಸ್ತೂಲ್​ನ ನಾಶ ಪಡಿಸಿದ್ದಾರೆ. ಪಿಸ್ತೂಲ್ ಪತ್ತೆಗಾಗಿ ಎಸ್​ಐಟಿ ಮತ್ತು ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv