ತಮ್ಮ ಹೆಸ್ರಲ್ಲಿ ಫೇಕ್​​ ಪತ್ರ: ತನಿಖೆ ನಡೆಸುವಂತೆ ಇ.ಸಿ.ಗೆ ಮುರಳಿ ಮನೋಹರ್​​ ಜೋಷಿ ಮೊರೆ

ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿಗೆ, ಮುರಳಿ ಮನೋಹರ್​ ಜೋಷಿ ಬರೆದಿದ್ದಾರೆ ಎನ್ನಲಾದ ಫೇಕ್​​​ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆ ಪತ್ರದ ಕುರಿತು ತನಿಖೆ ಮಾಡುವಂತೆ ಮರಳಿ ಮನೋಹರ್​ ಜೋಷಿ, ಮುಖ್ಯ ಚುನಾವಣಾಧಿಕಅರಿ ಸುನಿಲ್ ಅರೋರ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 120 ಸೀಟ್​​ಗಳನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ ಪಕ್ಷ ಕೇವಲ 8 ರಿಂದ 10 ಸೀಟ್​ಗಳನ್ನ ಗೆಲ್ಲಬಹುದು ಅಷ್ಟೇ. ನನಗೆ ಸಮಾಜವಾದಿ ಪಕ್ಷ ಅಥವಾ ಬಹುಜನ ಸಮಾಜವಾದಿ ಪಕ್ಷವನ್ನ ಸೇರಲು ಒತ್ತಾಯ ಮಾಡ್ತಿದ್ದಅರೆ. ಆದ್ರೆ ತವರು ಪಕ್ಷವನ್ನ ಬಿಟ್ಟುಹೋಗಲು ಇಷ್ಟವಿರಲಿಲ್ಲ.

” ಇಂದಿರಾ ಗಾಂಧಿ ಆಡಳಿತದ ಸಂದರ್ಭದಲ್ಲಿ ನೀವು ಹಾಗೂ ಅಟಲ್​​ ಬಿಹಾರಿ ವಾಜಪೇಯಿ ಅವರು ಸಂಕಷ್ಟಗಳ ನಡುವೆ ಪಕ್ಷವನ್ನ ಕಟ್ಟಿದ್ರಿ. ಆದ್ರೆ ಇಂದು ಮೌಲ್ಯಗಳನ್ನ ಗಾಳಿಗೆ ತೂರುತ್ತಿದ್ದಾರೆ. ಹಿಂದಿನ ಸಭೆಯಲ್ಲಿ ನೀವು ನನ್ನನ್ನು ಸುಮ್ಮನಿರಿಸಿದ್ರಿ. ನಾನು ಮುಂದೆ ನಿಮ್ಮನ್ನು ಸುಮ್ಮನಿರಿಸುತ್ತೇನೆ. ಆದ್ರೆ ಇದು ದೇಶದ ಜನರಿಗೆ ಮಾಡುವ ದ್ರೋಹವಲ್ಲವೇ? ” ಎಂದು ಬರೆದಿರುವ ಪತ್ರ ಸುದ್ದಿ ಸಂಸ್ಥೆ ಎಎನ್​​​ಐ ವಾಟರ್​ಮಾರ್ಕ್​​ನೊಂದಿಗೆ ಹರಿದಾಡುತ್ತಿದೆ. ಈ ರೀತಿಯ ಯಾವುದೇ ಪತ್ರವನ್ನ ಹಂಚಿಕೊಂಡಿಲ್ಲ, ಇದು ಫೇಕ್​​​ ಎಂದು ಎಎನ್​​​ಐ ಕೂಡ ಈಗಾಗಲೇ ಸ್ಪಷ್ಟಪಡಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv