ನಿಖಿಲ್-ಯಶ್ ಒಂದೇ ಚಿತ್ರರಂಗದ ಕುಟುಂಬದವರು, ಪರಸ್ಪರ ಬೈದಾಡಬಾರದು-ತಾರಾ

ವಿಜಯಪುರ: ಬಿಜೆಪಿ ಬಗ್ಗೆ ಮತದಾರರಲ್ಲಿ ಒಲವು ಇದೆ. ಮತದಾರರು ಬಿಜೆಪಿ ಪರವಾಗಿ ಇದ್ದಾರೆ. ನಾವು ಮತ್ತೊಮ್ಮೆ ಪ್ರಧಾನಿ ಮೋದಿ ಸರ್ಕಾರ ನೋಡಬೇಕು ಎಂದು ನಟಿ, ಎಂಎಲ್​​​ಸಿ ತಾರಾ ಅನುರಾಧಾ ಹೇಳಿದ್ದಾರೆ.

ಇಂದು ಜಿಲ್ಲೆಗೆ ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿ ತಾರಾ ಅನುರಾಧಾ ಆಗಮಿಸಿ ಸಂಸದ ರಮೇಶ್​​ ಜಿಗಜಿಣಗಿ ಪರ ಮತಯಾಚನೆ ಮಾಡಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ತಾರಾ, ನಿಖಿಲ್ ಕುಮಾರಸ್ವಾಮಿ ಹಾಗೂ ಯಶ್ ಚಿತ್ರರಂಗದ ಕುಟುಂಬದವರು. ಒಬ್ಬರಿಗೆ ಒಬ್ಬರು ಬೈದುಕೊಂಡ್ರೆ ನಮ್ಮ ಮನೆಗೆ ನಾವೇ ಬೈದುಕೊಂಡಂತೆ. ಮಂಡ್ಯ ಕ್ಷೇತ್ರದ ಕಡೆಗೆ ಎಲ್ಲರ ಗಮನವಿದೆ. ಅದು ಚಿತ್ರರಂಗಕ್ಕೆ ಇರುವ ಶಕ್ತಿಗಾಗಿ. ಇಬ್ಬರೂ ನಟರು ಆರೋಪ ಮಾಡಬಾರದು ಎಂದು ಹೇಳಿದರು.

ಅಂಬರೀಶ್ ಅವರಿಗೆ ಒಬ್ಬರೇ ಹೆಂಡತಿ ವಿಚಾರವಾಗಿ ಮಾತನಾಡಿದ ತಾರಾ, ನಿಮಗೆ ಯಾಕೇ ಈ ಅನುಮಾನ ಇದೆ? ಅಯೋ ಛಿ.. ಛಿ.. ನನಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಮಾಧ್ಯಮದ ಎದುರು ತಾರಾ ಕೈ ಮುಗಿದರು. ನೀವು ಈ ತರಹ ಎಲ್ಲ ಕೇಳಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರ ಮೇಲೆ ಹಲ್ಲೆ ಆದರೆ ನಾನು ಜವಾಬ್ದಾರ ಅಲ್ಲ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ತಾರಾ, ಇದು ಖಂಡನೀಯವಾದದ್ದು. ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ಕೊಡುವುದು ಆ ಸರ್ಕಾರದ ಜವಾಬ್ದಾರಿ. ಸಿಎಂ ಕುಮಾರಸ್ವಾಮಿಯರು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv